March 7, 2026
ನಿಧನ

ನಿವೃತ್ತ ಮುಖ್ಯೋಪಾಧ್ಯಾಯ, ಭರತನಾಟ್ಯ ಗುರು ಕಮಲಾಕ್ಷ ಆಚಾರ್ಯ ನಿಧನ

ಬೆಳ್ತಂಗಡಿ : ಬೆಳ್ತಂಗಡಿ ಮಾದರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಶಾಲಾ ಮುಖ್ಯೋಪಾಧ್ಯಾಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಮಲಾಕ್ಷ ಆಚಾರ್ಯ (77ವ) ಇ೦ದು ಸಂಜೆ 8 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು.
ಇವರು ಬೆಳ್ತಂಗಡಿ ಮಾದರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಮಲಾಕ್ಷ ಆಚಾರ್ಯ ಅವರು ಭಾರತ ನಾಟ್ಯ ತರಗತಿಯನ್ನು ನಡೆಸುತ್ತಿದ್ದು, ಹಲವು ಮಂದಿ ಶಿಷ್ಯ ವರ್ಗವನ್ನು ಹೊಂದಿದ್ದರು. ಇವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತ ಗೊಂಡಿದ್ದಾರೆ.ಮೃತರು ಇಬ್ಬರು ಪುತ್ರಿಯರು ಹಾಗೂ ಬಂಧು ವಗ೯, ಶಿಷ್ಯ ವರ್ಗವನ್ನು ಅಗಲಿದ್ದಾರೆ. ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಲಾಯಿಲ‌ ಸಂತಾಪ ಸೂಚಿಸಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗ ಬೆಳ್ತಂಗಡಿ ಲಾಯಿಲದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related posts

ನೆರಿಯ: ಬೀಜದಡಿ ನಿವಾಸಿ ಗೋಪಿ ನಿಧನ

Suddi Udaya

ಬಾಯ೯ : ನಿವೃತ್ತ ಯೋಧ ಭವಾನಿ ಶಂಕರ್ ನಿಧನ

Suddi Udaya

ಪ್ರಸಿದ್ಧ ಗುಜರಾತ್ ಉದ್ಯಮಿ ಶಶಿಧ‌ರ್ ಶೆಟ್ಟಿ ನವಶಕ್ತಿ ಯವರಿಗೆ ಮಾತೃ ವಿಯೋಗ

Suddi Udaya

ನಾವರ ರಾಜಪಾದೆ ನಿವಾಸಿ ಹಿಲಾರಿ ಡಿ.ಸೋಜ ನಿಧನ

Suddi Udaya

ಪದ್ಮುಂಜ ಮುಗೇರಡಿ ನಿವಾಸಿ ಸುಶೀಲ ಶೆಟ್ಟಿ ನಿಧನ

Suddi Udaya

ಹಿರಿಯ ಅಡಿಕೆ ವ್ಯಾಪಾರಿಯಾಗಿದ್ದ ಟಿ. ಉಮರಬ್ಬ ನಿಡಿಗಲ್ ನಿಧನ

Suddi Udaya
error: Content is protected !!