ಕೊಕ್ರಾಡಿ : ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನವು ಚಾಲನಾ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದು ಸವಾರರಿಗೆ ಗಾಯಗಳಾದ ಘಟನೆ ಜ.13ರಂದು ನಡೆದಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಜ.13 ರಂದು ರಾತ್ರಿ ಕೊಕ್ರಾಡಿ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನ ಅದರ ಸವಾರ ಚಾಲನಾ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದು ಸಹ ಸವಾರ ಲೋಹಿತ್ ರವರ ಕಾಲಿಗೆ ಹಾಗೂ ಸವಾರ ತಿಲಕೇಶ ರವರ ಕೈ ಕಾಲಿಗೆ ತರಚಿದ ಹಾಗೂ ಗುದ್ದಿದ ಗಾಯಗಳಾಗಿದ್ದು ಅಪಘಾತದಿಂದ ಉಂಟಾದ ನೋವು ಉಲ್ಬಣಿಸಿರುವುದರಿಂದ ಗಾಯಾಳುಗಳು ಉಜಿರೆ ಬೆನಕ ಆಸ್ಪತ್ರೆಗೆ ಹೋದ ಸಮಯ ಸಹ ಸವಾರ ಲೋಹಿತ್ ರವರ ಕಾಲಿನ ಎಕ್ಸರೇ ತೆಗೆದು ನೋಡಲಾಗಿ ಮೂಳೆ ಮುರಿತದ ಗಾಯಗಳಾಗಿ ಚಿಕಿತ್ಸೆಗೆ ದಾಖಲಾಗಿದ್ದು, ಸವಾರ ತಿಲಕೇಶ ಹೋರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಈ ಬಗ್ಗೆ ಪ್ರಥಮವಾಗಿ ಸವಾರರಿಬ್ಬರು ಅಣ್ಣ-ತಮ್ಮಂದಿರಾಗಿದ್ದರಿಂದ ದೂರು ನೀಡದೇ ಇದ್ದು ಈಗ ಸಹ ಸವಾರ ಲೋಹಿತ್ ರವರಿಗೆ ಉಂಟಾದ ಗಾಯ ತೀವ್ರಸ್ವರೂಪದ್ದಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ.