25.4 C
ಪುತ್ತೂರು, ಬೆಳ್ತಂಗಡಿ
January 19, 2025
Uncategorized

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆಯು ಜ.19ರಂದು ಶ್ರೀರಾಮ ಸೇವಾ ಮಂದಿರದಲ್ಲಿ ನಡೆಯಿತು.

ಕೊಕ್ಕಡ ಪ್ರಾ.ಕೃ.ಪ. ಸಂಘದ ನಿಕಟಪೂರ್ವ ಉಪಾಧ್ಯಕ್ಷ ಈಶ್ವರ ಭಟ್‌ ಹಿತ್ತಿಲು ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಚುನಾವಣಾ ಪ್ರಭಾರಿ ಧರ್ಮಸ್ಥಳ ಪ್ರಾ.ಕೃ.ಪ. ಸಂಘದ ಅಧ್ಯಕ್ಷ ಪ್ರೀತಮ್, ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್‌ ಅಧ್ಯಕ್ಷ ಕೃಷ್ಣ ಭಟ್, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೊಲ್ಲಾ, ಕಾರ್ಯದರ್ಶಿ ಗಣೇಶ್ ಕೆ. ಹೊಸ್ತೋಟ, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ವೆಂಕಪ್ಪಯ್ಯ, ಕೊಕ್ಕಡ ಪಂಚಾಯತ್‌ ಅಧ್ಯಕ್ಷೆ ಬೇಬಿ, ಕೊಕ್ಕಡ ಪ್ರಾ.ಕೃ.ಪ. ಸಂಘದ ನಿಕಟ ಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಪೂವಾಜೆ, ಕೊಕ್ಕಡ ಗ್ರಾಮ ಪಂಚಾಯತ್ ನಿಕಟ ಪೂರ್ವಧ್ಯಕ್ಷ ಯೋಗೀಶ್ ಆಳಂಬಿಲ, ತಾಲೂಕು ಎಸ್‌. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಪಟ್ರಮೆ ಪಂಚಾಯತ್‌ ಅಧ್ಯಕ್ಷ ಮನೋಜ್ ಕುಮಾರ್ ಪುರಂದರ ಕಡೀರ ಮತ್ತು ಅಭ್ಯರ್ಥಿಗಳು ಉಪಸ್ಥಿತರಿದ್ದರು.

ನಾಮ ಪತ್ರಿಕೆ ಸಲ್ಲಿಕೆಯ ಅದ್ದೂರಿ ಮೆರವಣಿಗೆ: ಸಾಮಾನ್ಯ ಕ್ಷೇತ್ರದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಕುಶಾಲಪ್ಪ ಗೌಡ ಪೂವಾಜೆ, ವಿಠಲ ಬಂಡಾರಿ, ಶ್ರೀನಾಥ್ ಬಡೆ ಕೈಲು,ಪದ್ಮನಾಭ ಕಾಯಿಲ, ಉದಯ ಕುಮಾರ್ ಅನಾರು, ಮಹಾಬಲ ಶೆಟ್ಟಿ ಪಟ್ಟೂರು, ಹಿಂದುಳಿದ ವರ್ಗದ ಎ ಕ್ಷೇತ್ರದ ಅಭ್ಯರ್ಥಿ ಸುನೀಲ್ ಕೊಲ್ಲಾಜೆ, ಹಿಂದುಳಿದ ವರ್ಗ ಬಿ ಕ್ಷೇತ್ರದ ಅಭ್ಯರ್ಥಿ ರವಿಚಂದ್ರ ಪುಲ್ಕೆತ್ತೂರು, ಮಹಿಳಾ ಕ್ಷೇತ್ರದ ಅಭ್ಯರ್ಥಿಗಳಾದ ಪ್ರೇಮವತಿ ಕಲ್ಲಾಜೆ, ಅಶ್ವಿನಿ ರವಿ ನಾಯ್ಕ ಓಣಿತ್ತಾರು, ಪರಿಶಿಷ್ಟ ಜಾತಿ ಅಭ್ಯರ್ಥಿ ಮುತ್ತಪ್ಪ ಕೊಕ್ಕಡ, ಪರಿಶಿಷ್ಟ ಪಂಗಡ ಅಭ್ಯರ್ಥಿ ವಿಶ್ವನಾಥ್ ಕುಕ್ಕುದೋಲಿ ಇವರೆಲ್ಲರೂ ಅದ್ದೂರಿ ಮೆರವಣಿಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಯೋಗೀಶ್ ಆಳಂಬಿಲ ನಿರೂಪಿಸಿದರು. ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿದರು. ಪಂಚಾಯತ್‌ ಸದಸ್ಯೆ ಲತಾ ವಂದಿಸಿದರು.

Related posts

ಶಿಶಿಲ: ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿರದಲ್ಲಿ ನೋಂಪಿ

Suddi Udaya

ಪಟ್ರಮೆ ‘ಸ್ಪಂದನ’ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಚಿಕ್ಕಮಗಳೂರು: ಇಬ್ಬರು ನಕ್ಸಲ್ ಬೆಂಬಲಿತ ಶಂಕಿತರಿಬ್ಬ ರು ವಶಕ್ಕೆ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya

ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Suddi Udaya

ಶಿಶಿಲ :ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

Suddi Udaya
error: Content is protected !!