18.6 C
ಪುತ್ತೂರು, ಬೆಳ್ತಂಗಡಿ
January 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ಇದರ ಸ್ವಂತ ಕಟ್ಟಡ “ಆಶಾಕಿರಣ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಸಂಘದ ಪ್ರಧಾನ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ಇದರ ಸ್ವಂತ , ಭವ್ಯವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಕಟ್ಟಡ “ಆಶಾಕಿರಣ” ವಾಣಿಜ್ಯ ಸಂಕೀರ್ಣ ಇದರ ಲೋಕಾರ್ಪಣೆ ಕಾರ್ಯಕ್ರಮ ಜ. 23 ರಂದು ಜರುಗಿತು.

ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ಪ್ರಧಾನ ಗುರು ಅ.ವಂ.ಫಾ. ವಾಲ್ಟರ್ ಡಿಮೆಲ್ಲೊ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ಹೆನ್ರಿ ಲೋಬೊ ವಹಿಸಿದ್ದರು.

ಆಶಾಕಿರಣ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ಆಡಳಿತ ಮಂಡಳಿ ಸಭಾಭವನದ ಉದ್ಘಾಟನೆಯನ್ನು ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ನೆರವೇರಿಸಿದರು.

ಗೌರವ ಅತಿಥಿಗಳಾಗಿ ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್‌ನ ನಿಕಟಪೂರ್ವಾಧ್ಯಕ್ಷ, ನೋಟರಿ ವಕೀಲ ಸೇವಿಯರ್ ಪಾಲೇಲಿ ಭಾಗವಹಿಸಿದ್ದರು.


ವೇದಿಕೆಯಲ್ಲಿ ಹೋಲಿ ರಿಡಿಮರ್ ಚಚ್ ೯ನ ಸಂಚಾಲಕ ಕ್ಲಿಫರ್ಡ್ ಪಿಂಟೋ,ಆಡಳಿತ ಮಂಡಳಿ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐವನ್ ಗೊನ್ಸಾಲ್ವಿಸ್,
ಆಡಳಿತ ಮಂಡಳಿ ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ದಾನ್ಹಾ, ಹೆರಾಲ್ಡ್ ಪಿಂಟೊ, ಅಲ್ಸೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ,ತೋಮಸ್. ಆರ್. ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಶ್ರೀಮತಿ ಪೌಲಿನ್ ರೇಗೊ, ಶ್ರೀಮತಿ ಪ್ಲಾವಿಯ ಡಿಸೋಜ, ನಾಮ ನಿರ್ದೇಶಕರಾದ ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಹಾಗೂ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಟ್ಟಡದ ಇಂಜಿನಿಯರಿಂಗ್ ಅಲೆನ್ ಬ್ಯಾಪ್ಟಿಸ್ಟ್ ಡಿಸೋಜ, . ಗುತ್ತಿಗೆದಾರರ ಜೆರಾಲ್ಡ್ ಮೆಲ್ವಿನ್ ಫೆರ್ನಾಂಡಿಸ್ ಉಜಿರೆ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಹೆನ್ರಿ ಲೋಬೋ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಸನ್ ಮಡಂತ್ಯಾರು ಕಾಯ೯ಕ್ರಮ ನಿರೂಪಿಸಿದರು.

Related posts

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya

ತೆಂಕಕಾರಂದೂರು: ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣ ತಡೆಗೋಡೆ ಕುಸಿತ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಕೊಯ್ಯೂರು ರಸ್ತೆಗೆ ಉರುಳಿದ ಹೆಮ್ಮರ : ಸ್ಥಳೀಯರ ಸಹಕಾರದಲ್ಲಿ ಇಲಾಖೆಯಿಂದ ತೆರವು

Suddi Udaya

ರಾಜ್ಯಮಟ್ಟದ ಕರಾಟೆ: ಇಶಿತ ಬೆಳ್ತಂಗಡಿಯವರಿಗೆ ಪ್ರಶಸ್ತಿ

Suddi Udaya
error: Content is protected !!