September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅಳದಂಗಡಿ ಗ್ರಾ.ಪಂಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಭೇಟಿ: ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿಶೀಲನೆ

ಅಳದಂಗಡಿ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಡಾ. ಆನಂದ ಕೆ. IAS ಅಳದಂಗಡಿ ಗ್ರಾ. ಪಂಗೆ ಭೇಟಿ ನೀಡಿ, ಸದ್ರಿ ಗ್ರಾ. ಪಂ ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸರಕಾರಿ ಪ್ರೌಢ ಶಾಲಾ ಶೌಚಾಲಯ, ಎನ್ಆರ್ ಎಲ್ ಎಮ್ ಶೆಡ್ ಸಮುದಾಯ ಕಾಮಗಾರಿಗಳನ್ನು ಪರಿಶೀಲಿಸಿದರು.

ಶಾಲಾ ಭೇಟಿ ವೇಳೆ ಎಸ್. ಎಸ್. ಎಲ್. ಸಿ ಮಕ್ಕಳೊಂದಿಗೆ ಪರೀಕ್ಷೆಯ ತಯಾರಿ ಕುರಿತು ಸಂವಾದ ನಡೆಸಿದರು.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಗ್ರಾ. ಪಂ ಭೇಟಿ ಸಂದರ್ಭ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಎನ್, ನರೇಗಾದ ಪ್ರಭಾರ ಸಹಾಯಕ ನಿರ್ದೇಶಕರು(ಗ್ರಾ. ಉ) ಶ್ರಿಮತಿ ಸಫಾನ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪೂರ್ಣಿಮಾ,ತಾಂತ್ರಿಕ ಸಂಯೋಜಕರು ( ಸಿವಿಲ್) ನಿತಿನ್ ರೖ, ತಾಂತ್ರಿಕ ಸಹಾಯಕರಾದ (ಕೃ/ತೋ/ಅ)ಪ್ರಾರ್ಥನಾ, ಲೀಸಾ ಡೆ ಸಾ, ತಾಲೂಕು ಐಇಸಿ ಸಂಯೋಜಕರು, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಮದ್ದಡ್ಕ: ಬಾವುಟಗುಡ್ಡೆ ನಿವಾಸಿ ಸುನೀತ ಶೆಣೈ ನಿಧನ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಲ್ಲಿ ಸಂಭ್ರಮದ ‘ಆಟಿಡೊಂಜಿ ದಿನ’ ಆಚರಣೆ

Suddi Udaya

ವೇಣೂರು ಪೊಲೀಸ್ ಠಾಣೆ ವತಿಯಿಂದ ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಅಕ್ರಮ ಸಾಗಾಣೆ ವಿರುದ್ಧದ ಜನಜಾಗೃತಿ ಅಭಿಯಾನ ಹಾಗೂ ಅರಿವು ಕಾರ್ಯಕ್ರಮ

Suddi Udaya

ನಾಳೆ(ಜು.8) ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya
error: Content is protected !!