September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡೂರುನಲ್ಲಿ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 4ನೇ ನೂತನ ಮುಂಡೂರು ಶಾಖೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

ಮುಂಡೂರು: ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 4ನೇ ನೂತನ ಮುಂಡೂರು ಶಾಖೆಯ
ಉದ್ಘಾಟನಾ ಸಮಾರಂಭ ಜ.25 ರಂದು ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಜರುಗಿತು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ನೂತನ ಶಾಖೆಯನ್ನು ಉದ್ಘಾಟಿಸಿ, ಶುಭಾ ಹಾರೈಸಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೇಲಂತಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ,, , ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿ ಆಡಳಿತ ಮೊಕ್ತೇಸರರು ರಾಜೀವ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡೂರು, ಪ್ರಧಾನ ಅರ್ಚಕರು ಎಂ. ಅರವಿಂದ ಭಟ್, ಯಾದವ ಕುಲಾಲ್ ಅಧ್ಯಕ್ಷರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘ ಮುಂಡೂರು, ಆನಂದ ಆಚಾರ್ಯ ಮುಂಗುಡಮೆ ಮಾಜಿ ಉಪಾಧ್ಯಕ್ಷರು, ಸಿ.ಎ. ಬ್ಯಾಂಕ್ ಬೆಳ್ತಂಗಡಿ, ಸಂತೋಷ್ ಕುಮಾರ್ ಮುಂಡೂರು ಗ್ರಾ. ಪಂ. ಸದಸ್ಯರು, ಮೇಲಂತಬೆಟ್ಟು ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ ಭಂಡಾರಿ, ಮಾಜಿ ಉಪಾಧ್ಯಕ್ಷ ಆನಂದ ಆಚಾರ್ಯ, ಆಡಳಿತ ಮಂಡಳಿ ನಿರ್ದೇಶಕರಾದ
ಮುನಿರಾಜ ಅಜ್ರಿ, ಪುರಂದರ, ಹರಿಯಪ್ಪ, ರಾಧಾ, ನಾರಾಯಣ ಆಚಾರ್ಯ, ಅಶೋಕ್ ರೈ, ಶ್ರೀನಾಥ್ ಕೆ.ಎಂ, ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ್, ಪ್ರೇಮ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸುದಶ೯ನ್, ಪ್ರಸಾದ್ ಎಸ್.
ಮುಖ್ಯ ಕಾರ್ಯನಿರ್ವಹಣಧಿಕಾರಿ ಉಪಸ್ಥಿತರಿದ್ದರು.

ಶ್ರೀಮತಿ ನಳಿನಿ ಇವರ ಪ್ರಾಥ೯ನೆ ಬಳಿಕ ಗ್ರಾಂ.ಪಂ ಸದಸ್ಯ ಸಂತೋಷ್ ಕುಮಾರ್ ಮುಂಡೂರು ಸ್ವಾಗತಿಸಿದರು.ಮುಂಡೂರು ಕಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಕಲ್ಲೇಶಪ್ಪ ಕೆ.ಬಿ ಕಾಯ೯ಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ವಂದಿಸಿದರು.. ಬ್ಯಾಂಕ್ ನ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಹೊಸಂಗಡಿ: ಗಣೇಶ್ ಪೂಜಾರಿ ಕಾರಾಜೆ ಮಾಲೀಕತ್ವದ ಶ್ರೀ ದುರ್ಗಾ ಅಲ್ಯುಮಿನಿಯಂ ಫ್ಯಾಬ್ರಿಕೇಷನ್ ಶುಭಾರಂಭ

Suddi Udaya

ಧರ್ಮಸ್ಥಳ ಅಶೋಕನಗರದಲ್ಲಿ77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹಿರಿಯ ಶ್ರೇಣಿ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

Suddi Udaya

ಉರುವಾಲು: ನೆಕ್ಕಿಲು ಶಾಲಾ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಬೀಳ್ಕೊಡುಗೆ ಸಮಾರಂಭ

Suddi Udaya

ಹಾವು ಕಡಿತದಿಂದ ಶಿಶಿಲ ಕಾರೆಗುಡ್ಡೆ ನಿವಾಸಿ ಚೋಮ ನಿಧನ

Suddi Udaya
error: Content is protected !!