April 21, 2025
Uncategorized

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

ಉಜಿರೆಯ ಮಂಜುಶ್ರೀ ಮುದ್ರಣಾಲಯದಲ್ಲಿ ಸುದೀರ್ಘ 42 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರೊಡಕ್ಷನ್ ವಿಭಾಗದ ಮೇಲ್ವಿಚಾರಕರಾಗಿ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಿವೃತ್ತರಾದ ವಿಶ್ವನಾಥ ಶೆಟ್ಟಿಯವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭವನ್ನು ಎಸ್.ಡಿ.ಎಂ. ಮಹಿಳಾ ಐ.ಟಿ.ಐ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿ ಉಜಿರೆ ಎಸ್.ಡಿಎಂ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಪ್ರೊ. ಎಸ್. ಸತೀಶ್ಚಂದ್ರರವರು ವಿಶ್ವನಾಥ ಶೆಟ್ಟಿ ಮತ್ತು ಶ್ರೀಮತಿ ವನಿತಾ ವಿಶ್ವನಾಥ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿ, ಅವರು ಸಂಸ್ಥೆಗೆ ಸುದೀರ್ಘ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ವಿಶ್ವನಾಥ ಶೆಟ್ಟರ ಸೇವೆಯನ್ನು ಪ್ರಶಂಸಿಸಿದರು.

ಸಹೋದ್ಯೋಗಿ ಮೋನಪ್ಪ ಟಿ. ಹಾಗೂ ಚಿತ್ತರಂಜನ್ ವಿಶ್ವನಾಥ ಶೆಟ್ಟರ ಕಾರ್ಯವೈಖರಿ ಕುರಿತು ಅನುಭವ ಹಂಚಿಕೊಂಡರು.

ಮಂಜುಶ್ರೀ ಮುದ್ರಣಾಲಯದ ವ್ಯವಸ್ಥಾಪಕರಾದ ಶೇಖರ್ ಟಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ವ್ಯವಸ್ಥಾಪಕರಾದ ವೆಂಕಪ್ಪ ವಂದಿಸಿದರು, ರವಿ ಪರಕ್ಕಜೆ ನಿರೂಪಿಸಿದರು.

ಮುದ್ರಣಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಉಜಿರೆ: ಮಾಚಾರಿನಲ್ಲಿ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ಮನೆಗೆ ಕೆಸರು ಕಲ್ಲು ಹಾಕಿ ಮನೆ ನಿರ್ಮಾಣಕ್ಕೆ ಚಾಲನೆ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಬೆಳ್ತಂಗಡಿ ನಿಂದ ಕಾರ್ಗಿಲ್ ವಿಜಯ‌ ದಿವಸ್

Suddi Udaya

ಕೆದ್ದು ಮಾರ್ನಿಂಗ್ ಕ್ರಿಕೆಟರ್ಸ್ ನಿಂದ ಕೀರ್ತನ್ ರವರ ಚಿಕಿತ್ಸೆಗಾಗಿ ಧನಸಹಾಯ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಜಾರಿಗೆಬೈಲು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವು

Suddi Udaya

ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆಯ ಹಿನ್ನಲೆ: ಜು.7 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!