April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಬೆಳಾಲಿನ ಪ್ರಗತಿಪರ ಕೃಷಿಕ ಶಿವಪ್ಪಗೌಡರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಅವಾರ್ಡ್

ಬೆಳ್ತಂಗಡಿ: ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಬೆಳ್ತಂಗಡಿಯ ಜೆಸಿಐ ಮಂಜುಶ್ರೀಯು ಈ ತಿಂಗಳಿನ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಆಗಿ ಬೆಳಾಲಿನ ಉರೆಜ್ಜ ಮನೆಯ ಪ್ರಗತಿಪರ ಕೃಷಿಕ ಶಿವಪ್ಪಗೌಡರನ್ನು ಅಭಿನಂದಿಸಿ ಗೌರವಿಸಿದೆ.

ಶಿವಪ್ಪ ಗೌಡ ಮೊದಲಿಗೆ ಸಾಮಾನ್ಯ ಕೃಷಿಕರಾಗಿ ಅಡಿಕೆ, ತರಕಾರಿ, ಭತ್ತ, ತೆಂಗು, ರಬ್ಬರ್, ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡು ಉಜಿರೆಯ ರೈತ ಉತ್ಪಾದಕರ ಸಂಘ, ಬೆಳಾಲಿನ ಹಾಲು ಉತ್ಪಾದಕರ ಸಂಘ ಹಾಗೂ ರಬ್ಬರ್ ಉತ್ಪಾದಕರ ಸಂಘಗಳ ಸದಸ್ಯರಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡವರು.

ಸುಮಾರು 34 ವರ್ಷಗಳಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಸ್ಥಳೀಯವಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಭೂಮಿದಾನ:

ಶಿವಪ್ಪಗೌಡ ಪ್ರಗತಿಪರ ಕೃಷಿಕ ಮಾತ್ರವಲ್ಲದೇ ಶಿಕ್ಷಣ ಪ್ರೇಮಿಯೂ ಹೌದು. ಮಕ್ಕಳಿಗೆ ಉತ್ತಮ ಪ್ರಾಥಮಿಕ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸಹೋದರರ ಒಡಗೂಡಿ 8 ಸೆಂಟ್ಸ್ ಜಾಗವನ್ನು ಅಂಗನವಾಡಿ ತೆರೆಯಲೆಂದು ದಾನವಾಗಿ ಹಸ್ತಾಂತರಿಸಿದ್ದಾರೆ.

ಕೃಷಿ, ಸಾಮಾಜಿಕ,ಧಾರ್ಮಿಕ ಕ್ಷೇತ್ರಗಳಲ್ಲಿದ್ದ ಶಿವಪ್ಪಗೌಡರನ್ನು ಗುರುತಿಸಿ ಜೆಸಿಐ ಮಂಜುಶ್ರೀ ಯಲ್ಲಿ ಪದಾಧಿಕಾರಿಗಳ ಸಮ್ಮುಖದಲ್ಲಿ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೇಸಿಐ ಭಾರತ ದ ರಾಷ್ಟೀಯ ಸಂಯೋಜಕರದ ಪ್ರಶಾಂತ್ ಲಾಯಿಲ ವಲಯ ಉಪಾಧ್ಯಕ್ಷ ರಂಜಿತ್ ಹೆಚ್. ಡಿ ಪೂರ್ವ ಅಧ್ಯಕ್ಷರುಗಳಾದ ಚಿದಾನಂದ ಇದ್ಯಾ, ವಸಂತ ಶೆಟ್ಟಿ ಶ್ರದ್ದಾ, ಅಭಿನಂದನ್ ಹರೀಶ್, ಸುಭಾಶ್ಚಂದ್ರ ಎಂ. ಶಂಕರ್ ರಾವ್ ಬಿ ಬೆಳ್ತಂಗಡಿಯ ಸರ್ವ ಸದಸ್ಯರು ಜೂನಿಯರ್ ಜೇಸಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಜೇಸಿ ಪ್ರೇಮನಾಥ ಶೆಟ್ಟಿ ಇವರ ವೇದಿಕೆ ಆಹ್ವಾನದೊಂದಿಗೆ ಸಭೆಯ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಆಶಾಲತಾ ಪ್ರಶಾಂತ್ ವಹಿಸಿ ಸರ್ವರಿಗೂ ಸ್ವಾಗತ ಕೋರಿದರು, ಕಾರ್ಯದರ್ಶಿ ಶೈಲೇಶ್ ಕೆ ಹಿಂದಿನ ಸಭೆಯ ವರದಿ ಮಂಡಿಸಿ ಜೇಸಿ ಪ್ರಥ್ವಿರಾಜ್ ಜೈನ್ ಜನವರಿ ತಿಂಗಳಲ್ಲಿ ನಡೆದ ಕಾರ್ಯಕ್ರಮದ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಮೋದ್ ಚಿಬಿದ್ರೆ ಇಲ್ಲಿಯವರೆಗೆಗಿನ ಲೆಕ್ಕಪತ್ರ ಮಂಡಿಸಿದರು ಸೇರಿರುವ ಸರ್ವರಿಗೂ ಧನ್ಯವಾದವನ್ನು ಘಟಕದ ಕಾರ್ಯದರ್ಶಿ ಜೆಸಿ ಶೈಲೇಶ್ ಸಲ್ಲಿಸಿದರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ “ವೆಂಟಿಲೇಟರ್” ಉದ್ಘಾಟನೆ

Suddi Udaya

ಹೊಸ ವರ್ಷದ ಪ್ರಯುಕ್ತ ವಿಶೇಷ ಫಲಪುಷ್ಪಗಳಿಂದ ಅಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ

Suddi Udaya

ಸವಣಾಲು ಉದ್ಯಮಿ ಅರುಣ್ ಕುಮಾರ್ ನಿಧನ

Suddi Udaya

ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಮೆಗಾ ಡಿಸ್ಕೌಂಟ್ ಸೇಲ್

Suddi Udaya

ಬಂದಾರು ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಂದ ದಾಳಿ: ಸುಮಾರು 48 ಟನ್ ನಷ್ಟು ಅಕ್ರಮ ಮರಳು ವಶ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ: ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಎಮ್ಎಸ್

Suddi Udaya
error: Content is protected !!