April 21, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬೆಳ್ತಂಗಡಿ: ಕಾರು ಅಪಘಾತವಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಿಡುಪೆ ಬಳಿ ಫೆ.5ರಂದು ನಡೆದಿದೆ.

ಮೃತರನ್ನು ಕುಕ್ಕಾವು ನಿವಾಸಿ ಪುತ್ತಾಕ (ಇಬ್ರಾಹಿಂ)(67ವ) ಎಂದು ಗುರುತಿಸಲಾಗಿದೆ.

ಇವರು ಸಹೋದರನಾವುಮನೆಯ ಶುಭ ಕಾರ್ಯ ನಿಮಿತ್ತ ಮಾತುಕತೆಗಾಗಿ ಬಂಧುಗಳು ಜೊತೆಯಾಗಿ ದಿಡುಪೆಗೆ ಹೋಗಿದ್ದರು. ಕಾರಿನಿಂದ ಇಳಿದು ಮುಂದಕ್ಕೆ ಚಲಿಸುತ್ತಿದ್ದಂತೆ ಹಠಾತ್ತನೆ ಕಾರು ಮುಂದಕ್ಕೆ ಚಲಿಸಿ ಈ ಅವಘಡ ಸಂಭವಿಸಿದೆ. ಹಕೀಂ ಎಂಬವರು ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪುತ್ತಾಕ ಅವರನ್ನು
ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಅಸುನೀಗಿದ್ದಾರೆ.

ಮೃತರು ಪತ್ನಿ ರುಕ್ಯಾ, ಮಕ್ಕಳಾದ ರಫೀಕ್, ಝುಬೈದಾ ಮತ್ತು ಮಜೀದ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಗುರುವಾರ ಕಾಜೂರಿನ ದಫನ ಭೂಮಿಯಲ್ಲಿ ನಡೆಯಿತು.

Related posts

ಚಾರ್ಮಾಡಿ: ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಕುಂಕುಮಾರ್ಚನೆ; ದುರ್ಗ ನಮಸ್ಕಾರ ಪೂಜೆ

Suddi Udaya

ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪೆರೋಡಿತ್ತಾಯಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಪುಸ್ತಕ ವಿತರಣೆ

Suddi Udaya

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ಬಿಜೆಪಿ ಶಿಶಿಲ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ

Suddi Udaya

ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ

Suddi Udaya
error: Content is protected !!