April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಫೆ.12-16: ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಆರಾಟ್ ಉತ್ಸವ

ಚಾರ್ಮಾಡಿ: ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಆರಾಟ್ ಉತ್ಸವವು ಫೆ.12 ರಿಂದ ಫೆ.16 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಫೆ.12 ಪೂರ್ವಾಹ್ನ ಪ್ರಾರ್ಥನೆ ಪಂಚಗವ್ಯ ಪುಣ್ಯಾಹ, ಗಣಹೋಮ, ಸಾನಿಧ್ಯ ಕಲಶಾಭಿಷೇಕ, ಸಾನಿಧ್ಯ ಕಲಶ ಪೂಜೆ, ಕೊಡಿ ಏರುವುದು, ಮಧ್ಯಾಹ್ನ 12ಕ್ಕೆ ಮಹಾಪೂಜೆ ಉತ್ಸವಬಲಿ, ಸಂಜೆ 6ಕ್ಕೆ ದೀಪಾರಾಧನೆ, 7ಕ್ಕೆ ಊರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಕ್ಕೆ ಪಂಚಶ್ರೀ ಸಾಂಸ್ಕೃತಿಕ ಸೇವಾ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗುರುಗಳು ರಾಮಣ್ಣ ಭಂಡಾರಿ ನಿರ್ದೇಶನದ ಮಕ್ಕಳ ಯಕ್ಷಗಾನ ‘ಮಹಿಷಮರ್ದಿನಿ’. ಫೆ.13 ಬೆಳಿಗ್ಗೆ ಗಣಹೋಮ, ಉಷಃಪೂಜೆ, ಬಿಂಬಶುದ್ಧಿ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ತಂತ್ರಬಲಿ, ಉತ್ಸವಬಲಿ, ಸಂಜೆ ೭ಕ್ಕೆ ಊರವರ ಮತ್ತು ಪ್ರೌಢ ಶಾಲಾ ಮಕ್ಕಳು ಮತ್ತು ಕಾಲೇಜು ಮಕ್ಕಳ ನೃತ್ಯ ಕಾರ್ಯಕ್ರಮ ‘ನೃತ್ಯ ವೈವಿಧ್ಯ’, ರಾತ್ರಿ ೮ಕ್ಕೆ ದೊಡ್ಡ ರಂಗಪೂಜೆ, ಮಹಾಪೂಜೆ, ಉತ್ಸವ ಬಲಿ, ನೃತ್ಯಬಲಿ, 8.30ಕ್ಕೆ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಫೆ.14 ಬೆಳಿಗ್ಗೆ ಗಣಹೋಮ ಉಷಃಪೂಜೆ, ಪ್ರಾತಃಬಲಿ ಸಾನಿಧ್ಯ ನವಕ ಕಲಶಾಭಿಷೇಕ, ಸಂಜೆ ದೀಪಾರಾಧನೆ, ನೃತ್ಯಾರ್ಪಣಂ ಶ್ರೀ ದೇವಿ ಕಿರಣ್ ಕಲಾನಿಕೇತನ ಇದರ ನೃತ್ಯ ಶಿಕ್ಷಕಿ ವಿದೂಷಿ ಶ್ರೀಮತಿ ಸ್ವಾತಿ ಜಯರಾಂ ಮತ್ತು ವಿದೂಷಿ ಶ್ರೀಮತಿ ಸೃಷ್ಟಿ ಸತೀಶ್ ಇವರ ಶಿಷ್ಯ ವೃಂದದಿಂದ “ನಾಟ್ಯ ವೈಭವ, ಸಂಜೆ 8.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆ ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರು ಪ್ರಕಾಶ್ ಹೊಸಮಠ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಕೌನ್ಸಿಲರ್ ದುರ್ಗಾಪರಮೇಶ್ವರ ಭಟ್ ನೀಡಲಿದ್ದಾರೆ. ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದರೆ. ರಾತ್ರಿ 9-೦೦ರಿಂದ ಪಂಚಶ್ರೀ ಕಲಾವಿದರು ಚಾರ್ಮಾಡಿ ಈ ನಾಡರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಕುಲಾಲ್ ಸಾರಥ್ಯದ ಮಧು ಬಂಗೇರ ಕಲ್ಲಡ್ಕ ನಿರ್ದೇಶನದ “ಇನಿ ಅತ್ತ್ಂಡ ಎಲ್ಲೆ” ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಲಿದೆ.


ಫೆ.15 ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಪ್ರಾತಃಬಲಿ, ತುಲಾಭಾರ ಸೇವೆ, ನವಕ ಕಲಶಾಭಿಷೇಕ, ಸಂಜೆ 6ಕ್ಕೆ ಮತ್ತೂರು ಬೆಡಿ ಸೇವೆ, ಭಜನಾ ಕಮ್ಮಟೋತ್ಸವ, ರಾತ್ರಿ 9ಕ್ಕೆ ದೊಡ್ಡ ರಂಗಪೂಜೆ, ರಥಬೀದಿಯ ದೇವರ ಕಟ್ಟೆಗೆ ದೇವರ ಸವಾರಿ, ಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ, ಸೇವಾ ಸುತ್ತುಗಳು, ನೃತ್ಯಬಲಿ, ಬಟ್ಟಲು ಕಾಣಿಕೆ, ದೇವರ ಶಯನ, ಕವಾಟಬಂಧನ.
ಫೆ.16 ಬೆಳಿಗ್ಗೆ ಕವಾಟೋದ್ಘಾಟನೆ, ಆರಾಟು ಬಲಿ, ಆರಾಟು ಉತ್ಸವ, ದೇವರ ಜಳಕ ದೇವರ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಮಹಾಪೂಜೆ, ಕೊಡಿ ಇಳಿಸುವುದು, ಸಂಪ್ರೊಕ್ಷಣತೆ, ಮಂತ್ರಾಕ್ಷತೆ, ಸಂಜೆ ದೈವಗಳ ಭಂಡಾರ ಹೊರಡುವುದು, ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಸಂಜೆ 7ಕ್ಕೆ ರಂಗಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Related posts

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

Suddi Udaya

ಓಡಿಲ್ನಾಳ ಆಕಸ್ಮಿಕ ಬೆಂಕಿ

Suddi Udaya

ಉಜಿರೆ: ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ನಡ: ಸ.ಪ್ರೌ.ಶಾಲೆಯಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

Suddi Udaya

ಚಾರ್ಮಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

Suddi Udaya

ಮದ್ದಡ್ಕದಲ್ಲಿ ನ್ಯಾಯಬೆಲೆ ಅಂಗಡಿ ಶುಭಾರಂಭ

Suddi Udaya
error: Content is protected !!