September 6, 2026
ಶಾಲಾ ಕಾಲೇಜು

ಸ್ವಾಮಿ ವಿವೇಕಾನಂದರ ಕುರಿತು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

ಬೆಳ್ತಂಗಡಿ: ವಿವೇಕಾನಂದರ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಇತ್ತೀಚೆಗೆ ವಿವೇಕಾನಂದ ಸೇವಾಶ್ರಮ ಇದರ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ತಾಲೂಕಿನ ಪ್ರೌಢಶಾಲಾ ವಿಭಾಗದ ಮಕ್ಕಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಕುಮಾರಿ ನಿಷಿತಾ ನೇತಾಗಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ದ್ವಿತೀಯ ಸ್ಥಾನವನ್ನು ಶ್ರೇಯಾ ರೋಸ್ಲಿನ್ ಸೈಂಟ್ ಮೇರಿ ಪ್ರೌಢಶಾಲೆ ಲಾಯಿಲ ಇವರು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಮಕ್ಕಳಲ್ಲಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಸೇವಾಶ್ರಮ ಬೆಳ್ತಂಗಡಿ ಇದರ ಅಧ್ಯಕ್ಷರಾದ ಬಾಲಕೃಷ್ಣ ವಿ. ಶೆಟ್ಟಿ ಸವಣಾಲು, ಸಂಚಾಲಕ ರಾದ ಸುದೀಪ್ ಶೆಟ್ಟಿ ಉಪಾಧ್ಯಕ್ಷರಾದ ಗಿರೀಶ್ ಡೊಂಗ್ರೆ ಕಾರ್ಯದರ್ಶಿಗಳಾದ ಯಶವಂತ್ ದೇವಾಡಿಗ ವೇಣುರು ಹಾಗೂ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಗಣೇಶ್ ಭಂಡಾರಿ ನಿರ್ದೇಶಕರಾದ ಅಶೋಕ್ ರೈ ಉಪಸ್ಥಿತರಿದ್ದರು.

Related posts

ಎಲ್‌ಸಿಆರ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಪಾಲಡ್ಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಓದುವ ಸಪ್ತಾಹ

Suddi Udaya

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ

Suddi Udaya

ರಾಣಿ ಅಬ್ಬಕ್ಕ 500 ವಿಶೇಷ ಉಪನ್ಯಾಸ ಕಾರ್ಯಕ್ರಮ: ಶ್ರೀಮತಿ ರಶ್ಮಿತಾ ಜೈನ್ ಇವರಿಗೆ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರ

Suddi Udaya

ಬೆದ್ರಬೆಟ್ಟು: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!