ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಜಮಾಅತ್ ಅಧೀನದಲ್ಲಿ ಪರಪ್ಪು ಯೂನಿಟ್ ನ ಕೆ.ಎಮ್.ಜೆ ಮತ್ತು ಎಸ್.ವೈ.ಎಸ್ ಸಮಿತಿಗಳ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಫೆ.07 ರಂದು ದರ್ಗಾ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಪರಪ್ಪು ಖತೀಬರಾದ ಎಫ್.ಎಚ್. ಮುಹಮ್ಮದ್ ವಿಸ್ಬಾಹಿ ಅಲ್ ಫುರ್ಖಾನಿ ಅಧ್ಯಕ್ಷತೆ ವಹಿಸಿದ್ದರು. ಪರಪ್ಪು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕೆ.ಎಮ್.ಜೆ ಗುರುವಾಯನಕೆರೆ ಸರ್ಕಲ್ ನ ಅಧ್ಯಕ್ಷ ಹಮೀದ್ ಮುಸ್ಲಿಯಾರ್, ಹಂಝ ಗೋವಿಂದೂರು, ಹಾಜಿ ಇಸ್ಮಾಯಿಲ್ ಜಾರಿಗೆಬೈಲು, ಎಸ್.ವೈ.ಎಸ್ ಗುರುವಾಯನಕೆರೆ ಸರ್ಕಲ್ ನ ಅಧ್ಯಕ್ಷರಾದ ಹಾಜಿ ಹಸೈನಾರ್ ಬಿ.ಬಿ.ಎಸ್, ಪ್ರಧಾನ ಕಾರ್ಯದರ್ಶಿ ಹಾರಿಶ್ ಕುಕ್ಕುಡಿ, ಉಪಾಧ್ಯಕ್ಷರಾದ ಹಮೀದ್ ಪರಿಮ, ಸದಸ್ಯರಾದ ಅಶ್ರಫ್ ಗುರುವಾಯನಕೆರೆ, ಪರಪ್ಪು ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಗೇರುಕಟ್ಟೆ , ಉಪಾಧ್ಯಕ್ಷರಾದ ಖಾದರ್ ಹಾಜಿ, ಕೋಶಾಧಿಕಾರಿ ಬಶೀರ್ ಎಸ್.ಎ,ಕಾರ್ಯದರ್ಶಿ ಹಾರಿಶ್ ಎನ್.ಎ., ಸದಸ್ಯರಾದ ಮಹಮ್ಮದ್ ಎನ್.ಎನ್.,ಹಾಜಿ ಬಿ.ಎಮ್.ಆದಂ ಎಸ್.ವೈ.ಎಸ್ ಈಸ್ಟ್ ಝೋನ್ ನ ಸಿದ್ದೀಕ್ ಜಿ.ಎಚ್, ಸ್ವಲಾತ್ ಸಮಿತಿಯ ಅಧ್ಯಕ್ಷ ಆಸಿಫ್ ಹಾಜಿ,ಎಸ್.ವೈ.ಎಸ್ ನ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜರಿದ್ದರು.
ಕೆ.ಎಮ್.ಜೆ ನಿರ್ಗಮಿತ ಅಧ್ಯಕ್ಷ ಅಬುಸ್ಟಾಲಿಹ್ ಮುಳ್ಳಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸೈಫುಲ್ಲಾ ಎಚ್.ಎಸ್.ಲೆಕ್ಕಪತ್ರ ಮಂಡಿಸಿ ಸರ್ವಾನುಮತದಿಂದ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಕೆ.ಎಮ್.ಜೆ.ನೂತನ ಸಮಿತಿಯ ಅಧ್ಯಕ್ಷರಾಗಿ ಹಾಜಿ ಎಸ್ ಉಸ್ಮಾನ್ , ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಎಸ್.ಎ.ಹಮೀದ್, ಕೋಶಾಧಿಕಾರಿಯಾಗಿ ಮಹಮ್ಮದ್ ಎನ್.ಎನ್, ಉಪಾಧ್ಯಕ್ಷರುಗಳಾಗಿ ಪಿ.ಎಸ್.ಮಹಮ್ಮದ್ ಮದನಿ, ಪಿ.ಬಿ.ಅಬೂಬಕ್ಕರ್, ಸಂಘಟನಾ ಕಾರ್ಯದರ್ಶಿಯಾಗಿ ಅಬೂ ಸ್ವಾಲಿಹ್, ಜತೆ ಕಾರ್ಯದರ್ಶಿಯಾಗಿ ಅಝೀಝ್ ಮದನಿ, ಹಾಗೂ 21 ಮಂದಿ ಸದಸ್ಯರು ಆಯ್ಕೆಯಾದರು.
ಎಸ್.ವೈ.ಎಸ್ ನೂತನ ಸಮಿತಿಯ ಅಧ್ಯಕ್ಷರಾಗಿ ಸೈಫುಲ್ಲಾ ಎಚ್.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಎ.ಉಮ್ಮರ್, ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್, ಉಪಾದ್ಯಕ್ಷರಾಗಿ ಹಮೀದ್ ಜಿ. ಡಿ ,ಇರ್ಫಾನ್ ಎಸ್,ದಅವಾ ಕಾರ್ಯದರ್ಶಿಯಾಗಿ ಮುಸ್ತಫಾ ಹಿಮಮಿ, ಹಿಸಾಬ ಮತ್ತು ಸಾಂತ್ವನ ಕಾರ್ಯದರ್ಶಿಯಾಗಿ ರಹಿಮಾನ್ ಗೇರುಕಟ್ಟೆ, ಹಾಗೂ 23 ಮಂದಿ ಸದಸ್ಯರಾಗಿ ಆಯ್ಕೆಯಾದರು.