29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದ ಎರಡನೇ ದಿನದ ತರಬೇತಿಯನ್ನು ಉಜಿರೆಯ ಎಂ ಆರ್ ಎಫ್ ಘಟಕದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಹಮ್ಮಿಕೊಳ್ಳಲಾಯಿತು.

ತರಬೇತಿ ಮೊದಲ ಹಂತದಲ್ಲಿ ಎಂ ಆರ್ ಎಫ್ ಘಟಕದ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ಎಂಆರ್‌ಎಫ್ ಘಟಕದ ಆಪರೇಟರ್ ಸುದೇಶ್ ಕಿಣಿ ನೀಡಿದರು. ನಂತರ ಮಿಕ್ಸಿಂಗ್ ಪ್ಲಾಂಟ್ ನಲ್ಲಿ ಬಿಟುಮಿನ್ ಪ್ಲಾಸ್ಟಿಕ್ ಮಿಕ್ಸಿಂಗ್ ಬಗ್ಗೆ ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿತಿನ್ ಮಾಹಿತಿ ನೀಡಿದರು.

ಬಳಿಕ ಮಲ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಮಲ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಲಾಯಿತು.

ಸ್ವಚ್ಛ ಸಂಕೀರ್ಣದಲ್ಲಿ ಸಂಗ್ರಹವಾಗುವ ಕಸಗಳಲ್ಲಿ ಮಿಶ್ರಿತವಾಗಿ ಬಂದಿರುವಂತಹ ಗಾಜಿನ ಬಳೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಉಡುಪುಗಳು, ಗಾಜಿನ ಬಾಟಲಿಗಳು ಹೀಗೆ ದಿನನಿತ್ಯ ಬಳಕೆ ಆದಂತಹ ವಸ್ತುಗಳು ಕಸವಾಗಿ ಬಂದಿರುವ ಈ ಎಲ್ಲ ವಸ್ತುಗಳನ್ನು ಪ್ರತ್ಯೇಕವಾಗಿ ತ್ಯಾಜ್ಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಪ್ರದರ್ಶನಕ್ಕೆ ಇರಿಸಲಾದ ವಸ್ತುಗಳನ್ನು ವೀಕ್ಷಿಸಲಾಯಿತು.

ಅಲ್ಲೇ ಇನ್ನೊಂದು ಘಟಕದಲ್ಲಿ ಸಂಗ್ರಹವಾದಂತ ಪ್ಲಾಸ್ಟಿಕ್ ನಿಂದ ಟೈಲ್ಸ್ ಗಳನ್ನು ಕೂಡ ಮಾಡಲಾಗುತ್ತಿದ್ದು ಅದರ ಒಂದು ಕಾರ್ಯವೈಖರಿಯನ್ನು ಅಲ್ಲಿನ ಮೇಲ್ವಿಚಾರಕರು ವಿವರಿಸಿದರು.

ತರಬೇತಿಯ ಮುಂದುವರಿದ ಭಾಗವಾಗಿ ಎಂ ಆರ್ ಎಫ್ ಘಟಕದ ಮುಂಭಾಗದಲ್ಲಿ ಸಂಪರ್ಕಿಸುವ ರಸ್ತೆಗೆ ಬಿಟುಮಿನ್ ಹಾಕುವ ಮೂಲಕ ನೇರ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದ. ಕ ಜಿ. ಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ. , ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ವೇಣುಗೋಪಾಲ್ , ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ರಘುನಾಥ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಪ್ ಶೆಟ್, ಪಂಚಾಯತ್ ರಾಜ್ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭರತ್, ಕರ್ನಾಟಕ ರಾಜ್ಯದ ಎಲ್ಲಾ ಎಸ್ ಬಿ ಎಂ (ಗ್ರಾ) ನೋಡಲ್ ಅಧಿಕಾರಿಗಳು, ಜಿಲ್ಲೆಯ ಉಪಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಕಾರ್ಯಕಾರಿ ಅಭಿಯಂತರರು, ರಾಜ್ಯ ಸಮಾಲೋಚಕರು, ಜಿಲ್ಲಾ ಪಂಚಾಯತ್ SBMG ಜಿಲ್ಲಾ ಸಮಾಲೋಚಕರು, ಉಜಿರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು, ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಮಲವಂತಿಗೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಪ್ರಕಾಶ್ ಕುಮಾರ್ ಜೈನ್, ಉಪಾಧ್ಯಕ್ಷರಾಗಿ ರೋಹಿಣಿ ಜಯವರ್ಮ ಗೌಡ ಅವಿರೋಧವಾಗಿ ಆಯ್ಕೆ

Suddi Udaya

ಶಾಸಕ ಹರೀಶ್ ಪೂಂಜರಿಂದ ಬೆಳ್ತಂಗಡಿ ಧರ್ಮ ಪ್ರಾಂತ್ಯ ಜೂಬಿಲಿ ಸಿದ್ಧತೆಯ ವೀಕ್ಷಣೆ

Suddi Udaya

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವನಮಹೋತ್ಸವ

Suddi Udaya

ಸಫರೇ ತಕ್‌ರೀಮ್ ಗೆ ಕಾಜೂರಿನಲ್ಲಿ ಚಾಲನೆ

Suddi Udaya

ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ದ್ರಢ ಕಲಶ

Suddi Udaya
error: Content is protected !!