
ಪಡಂಗಡಿ :ಇಲ್ಲಿಯ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು(ಫೆ.10) ಮುಂಡೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಗೊನೆ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಪ್ರಧಾನ ಹೋಮ ಪಂಚ ವಿಂಶತಿ ಕಲಶ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ದೈವಗಳಿಗೆ ಕಲಶಾಭಿಷೇಕ, ನಾಗದೇವರಿಗೆ ಕಲಶಾಭಿಷೇಕ ,ತಂಬಿಲ, ಪಂಚ ಪರ್ವ , ಸಾಮೂಹಿಕ ಶನಿ ಪೂಜೆ ಜರಗಿ ನಂತರ ಶ್ರೀಸದಾಶಿವ ದೇವರಿಗೆ ಮಹಾ ಪೂಜೆ ನಡೆದು, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್. ನಡಕ್ಕರ, ಆಡಳಿತ ಮೊಕ್ತೇಸರರು ಅಮರನಾಥ ಹೆಗ್ಡೆ, ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ , ಅರ್ಚಕರು ಕೆ. ರತ್ನಾಕರ ನೂರಿತ್ತಾಯ , ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ , ಕೋಶಾಧಿಕಾರಿ ಉದಯವರ್ಮ ,ಕಾರ್ಯದರ್ಶಿ ಜಗದೀಶ್ ಗೌಡ, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


ಸಂಜೆ ಮಲ್ಲಿಪ್ಪಾಡಿ, ಶ್ರೀ ಸದಾಶಿವ ಭಜನಾ ಮಂಡಳಿ ಹಾಗು ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನಾ ಸೇವೆ, ಶ್ರೀ ದೇವರಿಗೆ ರಂಗ ಪೂಜೆ ದೇವರ ಬಲಿ, ಬಟ್ಟಲು ಕಾಣಿಕೆ, ಮೂಜಿಲ್ನಾಯ, ಪಿಲಿ ಚಾಮುಂಡಿ, ಪಂಜುರ್ಲಿ, ಭೈರವ, ಗುಳಿಗ ದೈವ ಗಳ ನೇಮೋತ್ಸವ ಜರಗಲಿದೆ.
