![](https://suddiudaya.com/wp-content/uploads/2025/02/1001679752-1024x431.jpg)
ಗುಂಡೂರಿ : ಹಿರಿಯ ವೈದ್ಯ ಬಡಕೋಡಿ ಗುತ್ತು ಮನೆತನದ ವೇಣೂರಿನ ಡಾ| ಕೆ.ರವೀಂದ್ರ ಪ್ರಸಾದ್ ಇವರಿಂದ ಗುಂಡೂರಿಯ ಶ್ರೀಗುರುಚೈತನ್ಯ ಸೇವಾಶ್ರಮದ ವೈದ್ಯರ ಕೊಠಡಿಯ ಉದ್ಘಾಟನೆ ಫೆ.9ರಂದು ನಡೆಯಿತು.
ಕರಿಮಣೇಲಿನ ಮೂಂಕಾಡಿಯ ರಾಮಚಂದ್ರ ನಾಯಕ್ ಮತ್ತು ಗೀತಾರವರ 40 ನೇ ವರುಷದ ವೈವಾಹಿಕ ಜೀವನದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸೇವಾಶ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ ಕೇಳದ ಪೇಟೆ ವೈದಿಕರಾದ ಶ್ರೀಪತಿ ಭಟ್ ರವರಿಂದ ಗಣಹೋಮ ನಡೆದು ದಂಪತಿಗಳಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವೇಣೂರಿನ ಹಿರಿಯ ವೈದ್ಯ ಸರಳ ಸಜ್ಜನ ಈ ವೈದ್ಯರ ಮೂಲಕ ವೈದ್ಯರ ಕೊಠಡಿಯನ್ನು ಉದ್ಘಾಟಿಸಲಾಯಿತು ಮತ್ತು ಇವರನ್ನು ಸಂಮ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿ ರಮೇಶ್ ನಾಯಕ್ ಹಾಗೂ ಇವರ ಧರ್ಮಪತ್ನಿ ಸುಚಿತ್ರಾ, ಗೋಳಿಯಂಗಡಿಯ ಸತ್ಯರಾಜ್ ಪರಿವಾರ್ ನ ಉದ್ಯಮಿ ಸತ್ಯೇಂದ್ರ ರಾವ್,ಉದ್ಯಮಿ ಭಾಸ್ಕರ ಪೈ, ಸುದತ್ ಜೈನ್,ಆರಂಬೋಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಬಂಧುಮಿತ್ರರು ಉಪಸ್ಥಿತರಿದ್ದರು. ಮನೋರಂಜನೆಗಾಗಿ ಆಗ್ನಿದುರ್ಗೆ ರಸಮಂಜರಿ ತಂಡದಿಂದ ಸಂಗೀತ ಕಾರ್ಯಕ್ರಮ ವಿತ್ತು. ನಿವೃತ್ತ ಸೇನಾನಿ ರಾಮಚಂದ್ರ ನಾಯಕ್ ರವರು ಸ್ವಾಗತಿಸಿದರು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯರವರು ಕಾರ್ಯಕ್ರಮ ನಿರೂಪಿಸಿದರು.