ಬೆಳ್ತಂಗಡಿ: ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ದ ಅರಮಲೆ ಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮ ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಫೆ.13ರಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕುರಿತಂಬಿಲ ನೇಮೋತ್ಸವದ ಮೂಲಕ ಸಂಪನ್ನಗೊಂಡಿತು.

ಫೆ.12 ರಂದು ಬೆಳಗ್ಗೆ ಕ್ಷೇತ್ರದಲ್ಲಿ ಮಡಂತ್ಯಾರು ವೇ|ಮೂ|ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳಡಿ ಗಣಹೋಮ, ಶುಭ ಮುಹೂರ್ತದಲ್ಲಿ ದೈವ ಪ್ರತಿಷ್ಠೆ ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶಾಭಿಷೇಕ, ಪರಿಕಲಶಾಭಿಷೇಕ ನೇರವೇರಿತು. ಬಳಿಕ ಕುಂಭಸಂಕ್ರಮಣದ ಕುಂಭಲಗ್ನದಲ್ಲಿಪ್ರಧಾನ ಕುಂಭಾಭಿಷೇಕ ಪೂಜೆ, ಪಂಚ ಪರ್ವ ಪೂಜೆ, ಧ್ವಜಾರೋಹಣ, ಬಲಿ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಂಜೆ ಬಲಿ ಉತ್ಸವ ಬಳಿಕ ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಊರ ಹಾಗೂ ಪರವೂರಿನಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ವೈಭವ ಪೂರ್ಣವಾಗಿ ಜರುಗಿತು. ಭಕ್ತರು ಭಕ್ತಿ-ಭಾವದಿಂದ ಭಾಗವಹಿಸಿ, ಶ್ರೀ ಕೊಡಮಣಿತ್ತಾಯ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತೆಯನ್ನು ಪಡೆದರು.
ಫೆ.13 ರಂದು ಮುಂಜಾನೆ ಧ್ವಜ ಅವರೋಹಣ, ಬಳಿಕ ಕುರಿತಂಬಿಲ ನೇಮದೊಂದಿಗೆ ಫೆ.9ರಿಂದ ಫೆ.13ರವರೆಗೆ ಅರೆಮಲೆಬೆಟ್ಟದಲ್ಲಿ ನಡೆದ ದಾಖಲೆಯ ಮೊತ್ತದ ಅಭಿವೃದ್ಧಿ ಕಾರ್ಯ ಹಾಗೂ ಐತಿಹಾಸಿಕ ದಾಖಲೆಗಳೊಂದಿಗೆ ಸಂಪನ್ನಗೊಡಿತು.

ಈ ಸಂದರ್ಭದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರು ಬೀಡು, ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಸುನೀಶ್ ಕುಮಾರ್ ಕಡಂಬು, ಆನಂದ ಶೆಟ್ಟಿ ವಾತ್ಸಲ್ಯ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ರಾಜೇಶ್ ಶೆಟ್ಟಿ ನವಶಕ್ತಿ, ಶಶಿರಾಜ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ವಸಂತ ಗೌಡ ವರಕಬೆ, ಸೀತಾರಾಮ್ ವೈಭವ್, ರಾಜ್‌ಪ್ರಕಾಶ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅನುಗ್ರಹ, ಧರಣೇಂದ್ರ ಕೆ. ಜೈನ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಾರಾಯಣ ಆಚಾರ್ಯ ಬರಾಯ, ಗಣೇಶ್ ಆಚಾರ್ಯ ಗುಂಪಲಾಜೆ, ಸುಮಿತ್ರ ಆಚಾರ್ಯ, ಆನಂದಿ ಶೆಟ್ಟಿ ರತ್ನಗಿರಿ, ಪ್ರದೀಪ್ ಶೆಟ್ಟಿ ಸಾಯಿರಾಂ, ವಿತೇಶ್ ಬಂಗೇರ, ಗಣೇಶ್ ಕೆ. ಕುಲಾಲ್, ಶಾಂತಿರಾಜ್ ಜೈನ್, ಸನ್ಮಾತಿ ಜೈನ್ ಮಧುವನ ವಿಠಲ್ ಆಚಾರ್ಯ ಬರಾಯ, ಪ್ರಶಾಂತ್ ಸಾಲ್ಯಾನ್, ಕಿರಣ್‌ಕುಮಾರ್ ಶೆಟ್ಟಿ ಜೈನ ಪೇಟೆ ಸಹಿತ ವಿವಿಧ ಸಮಿತಿಯಗಳ ಪದಾಧಿಕಾರಿಗಳು, ಊರಿನ ಗಣ್ಯ ನಾಗರಿಕರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.