22.6 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಯನಾಡು ಸರಕಾರಿ ಪ್ರೌಢಶಾಲೆಗೆ ಯಸ್ಕಾವ ಕಂಪೆನಿಯ ವತಿಯಿಂದ ಉಪಕರಣಗಳ ಹಸ್ತಾಂತರ

ಪುಂಜಾಲಕಟ್ಟೆ: ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಬೆಂಗಳೂರಿನ ಯಸ್ಕಾವ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ರಮೇಶ್ ಶೆಟ್ಟಿ ಕುಮಂಗಿಲ ಇವರು ತಮ್ಮ ಕಂಪೆನಿಯ ಸಿಎಸ್ಆರ್ ನಿಧಿ ಮೂಲಕ ಕೊಡುಗೆಯಾಗಿ ನೀಡಿದ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಭಾಗವಹಿಸಿ ಶುಭ ಹಾರೈಸಿದರು. ಯಸ್ಕಾವ ಕಂಪೆನಿಯವರು ನೀಡಿದ ಸ್ಮಾರ್ಟ್ ಕ್ಲಾಸ್, ಡೆಸ್ಕ್‌ಟಾಪ್‌, ಇನ್ವರ್ಟರ್, ಪ್ರಾಜೆಕ್ಟರ್, ಪ್ರಿಂಟರ್, ಮತ್ತು ಕುರ್ಚಿಗಳು ಮುಂತಾದ ಸುಮಾರು ನಾಲ್ಕು ಲಕ್ಷ ಮೌಲ್ಯದ ವಸ್ತುಗಳನ್ನು ಕಂಪೆನಿಯ ಹೆಚ್ ಆರ್ ಮೆನೇಜರ್ ರಾಜೇಶ್ ಇವರು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಜಯಶೀಲ ಇವರಿಗೆ ಹಸ್ತಾಂತರಿಸಿದರು.

ಯಸ್ಕಾವ ಕಂಪೆನಿಯ ಪ್ರಮುಖರಾದ ಮಹೇಶ್ ಕುಮಾರ್, ಪುನೀತ್, ಶ್ರೀಕಾಂತ್ ಉಪಸ್ಥಿತರಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಮತ್ತು ಯಸ್ಕಾವ ಕಂಪೆನಿಯ ಪ್ರೊಡಕ್ಷನ್ ಮೆನೇಜರ್ ರಮೇಶ್ ಶೆಟ್ಟಿಯವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ ,ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಸಹಕಾರದ ಭರವಸೆ ನೀಡಿದರು. ಪಿಲಾತ್ತಬೆಟ್ಟು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ರತ್ನಾಕರ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಶೇಖರ್ ಶೆಟ್ಟಿ, ಶುಭಕರ್ ಶೆಟ್ಟಿ, ಹರೀಶ್ ಪೂಜಾರಿ ಕಜೆ , ಹರೀಶ್ ಶೆಟ್ಟಿ ಕುಮೇರು ಮತ್ತು ಶಾಲಾ ಎಸ್ಡಿಎಂಸಿ ಸದಸ್ಯರು ಭಾಗವಹಿಸಿದ್ದರು.

Related posts

ಬೆಳಾಲು: ಶ್ರೀಮತಿ ಸುಲೋಚನಾ ಎಸ್. ಕೆರ್ಮುಣ್ಣಾಯ ನಿಧನ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಲಾಯಿಲ ಸೈಂಟ್ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್ ಡೀಸಿಲ್ ದರ ಏರಿಸಿದ‌ ರಾಜ್ಯದ ಕಾಂಗ್ರೇಸ್ ಸರಕಾರದ ನಡೆ ಖಂಡನೀಯ ಸಿಪಿಐಎಂ ಬೆಳ್ತಂಗಡಿ ತಾಲೂಕು ಮುಖಂಡ ನ್ಯಾಯವಾದಿ ಬಿ.ಎಂ.ಭಟ್

Suddi Udaya

ಕೊಡಗು ವಿವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಕೆ.ಎನ್.ಜನಾರ್ಧನರವರ ನೇಮಕ: ಸಿರಿ ಸಂಸ್ಥೆಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯು ಶೇಪ್ ವಾಕರ್ ವಿತರಣೆ

Suddi Udaya

ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಗುಳಿ ಸ.ಹಿ.ಪ್ರಾ ಶಾಲೆಗೆ ರವಿಚಂದ್ರ ಗೌಡ ದಂಪತಿಯಿಂದ ಧ್ವಜಸ್ತಂಭ ಕೊಡುಗೆ

Suddi Udaya
error: Content is protected !!