April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಕ್ಕಿಂಜೆ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ: ಆಸ್ಪತ್ರೆಗೆ ದಾಖಲು

ಕಕ್ಕಿಂಜೆ: ಕಕ್ಕಿಂಜೆ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಫೆ.18 ರಂದು ಬೆಳಗ್ಗೆ ಸಂಭವಿಸಿದ್ದು ಸುಮಾರು 15 ವಿದ್ಯಾರ್ಥಿಗಳಿಗೆ ಹೆಜ್ಜೇನು ದಾಳಿ ಮಾಡಿದ್ದು , ಅಸ್ವಸ್ಥರಾಗಿದ್ದ ಮಕ್ಕಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ.

ಶಾಲೆಯ ಸುತ್ತ ಹೆಜ್ಜೇನುಗಳು ಸುತ್ತಾಡುತ್ತಿದ್ದು, ಸ್ಥಳೀಯರು ಬೆಂಕಿ ಹೊಗೆ ಹಾಕಿ ಹೆಜ್ಜೇನು ಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Related posts

ಧರ್ಮಸ್ಥಳ: ಆಟೋ ಚಾಲಕ ಸುಂದರ ಗೌಡ ನಿಧನ

Suddi Udaya

ಮಡಂತ್ಯಾರು ಯುನಿಯನ್ ಬ್ಯಾಂಕಿನ ಜನಸ್ನೇಹಿ ಬ್ಯಾಂಕ್ ಅಧಿಕಾರಿ ಅಶೋಕ್ ಕೋಟ್ಯಾನ್ ರಿಗೆ ಬೀಳ್ಕೊಡುಗೆ ಹಾಗೂ ಮಡಂತ್ಯಾರು ಸೊಸೈಟಿ ಅಧ್ಯಕ್ಷ- ಸಿಇಒ ಗೂ ಸನ್ಮಾನ

Suddi Udaya

ಲಾಯಿಲ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್ ಮೃತ್ಯು

Suddi Udaya

ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

Suddi Udaya

ಕಾಂಗ್ರೆಸ್ ಪಕ್ಷದ ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರ ಭೇಟಿ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!