September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

ಕಲ್ಮಂಜ: ಕಲ್ಮಂಜ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವಿಮಲಾ ರವರ ಅಧ್ಯಕ್ಷತೆಯಲ್ಲಿ ಫೆ.20ರಂದು ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಪಶುಸಂಗೋಪನೆ ಇಲಾಖೆಯ ಡಾ. ವಿಶ್ವನಾಥ ಸಿ. ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಪಂಚಾಯತ್‌ ಸದಸ್ಯರುಗಳಾದ ರಾಧಾಕೃಷ್ಣ ಗೌಡ, ಶ್ರೀಮತಿ ಲೀಲಾ, ಶ್ರೀಮತಿ ಸವಿತಾ, ಪ್ರವೀಣ, ವರದಾಕ್ಷ ಆಚಾರ್ಯ, ಎಂ. ಶ್ರೀಧರ, ಕೃಷ್ಣಮೂರ್ತಿ, ಶ್ರೀಮತಿ ಶೋಭಾವತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್ ಸ್ವಾಗತಿಸಿ, ಕಾರ್ಯದರ್ಶಿ ಸರೋಜಿನಿ ವಾರ್ಡ್ ಸಭೆಯ ಬೇಡಿಕೆಯನ್ನು ವಾಚಿಸಿದರು. ಸಿಬ್ಬಂದಿ ರಮೇಶ್ ವಂದಿಸಿದರು.

Related posts

ಪುತ್ತೂರಿನ ನೂತನ ಸಹಾಯಕ ಕಮಿಷನರ್ ಆಗಿ ಸ್ಟೆಲ್ಲಾ ವರ್ಗೀಸ್ ನಿಯುಕ್ತಿ

Suddi Udaya

ಫೆ.2: ಸೌತಡ್ಕದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ಬೆಳ್ತಂಗಡಿ ತಾಲೂಕು ಓಡೀಲು ಭಜನಾ ಸಮಿತಿಯಿಂದ ತುಮಕೂರು ಹಾಗೂ ಶಿರಾ ತಾಲೂಕಿನಲ್ಲಿ ಶ್ರೀ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಅದ್ಭುತ ಕುಣಿತ ಭಜನಾ ಸೇವೆ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

Suddi Udaya

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

Suddi Udaya

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಿಂದ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡುವವರ ವಿರುದ್ಧ ಜಾನ್ ಡೋ ಆದೇಶ

Suddi Udaya
error: Content is protected !!