ಉಜಿರೆ: ಇಲ್ಲಿಯ ಕಾಶಿಬೆಟ್ಟು ಬಳಿ ಬೈಕ್ ಹಾಗೂ ಕಾರುವಿನ ನಡುವೆ ಫೆ.21ರಂದು ಬೆಳಗಿನ ಜಾವ ಅಪಘಾತ ಸಂಭವಿಸಿದ ಘಟನೆ ನಡೆದಿದೆ.


ಅಳದಂಗಡಿಯಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಚಿಕ್ಕಮಂಗಳೂರು ನಿಂದ ಮೂಡಬಿದ್ರೆಗೆ ಬರುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಅಳದಂಗಡಿ ನಿವಾಸಿ ಸುರೆಂದ್ರ ಜೈನ್ ಬಲ್ಯಾಯಕೋಡಿ ಅವರಿಗೆ ಕಾಲಿಗೆ ಗಂಭೀರ ಗಾಯವಾಗಿದೆ.

ಕೂಡಲೇ ಬೈಕ್ ಸವಾರ ಸುರೇಂದ್ರರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ. ಬೆಂಗಳೂರು ಮೂಲದ ಕಾರು ಎಂದು ತಿಳಿದು ಬಂದಿದೆ.