ಕೊಕ್ಕಡ : ಸಂಬಂಧಿಕರು ಇಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ನಿಧನ ಹೊಂದಿದ ಘಟನೆ ಫೆ.20 ರಂದು ಕೊಕ್ಕಡದಲ್ಲಿ ನಡೆದಿದೆ.
ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಕೇಚೋಡಿ ನಿವಾಸಿಗಳಾದ ಸದಾನಂದ ಗೌಡ(37ವ) ಹಾಗೂ ಇವರ ದೊಡ್ಡಪ್ಪ ವೆಂಕಪ್ಪ ಗೌಡ(68ವ) ನಿಧನ ಹೊಂದಿದವರು.
ಜೀಪ್ ಚಾಲಕರಾಗಿದ್ದ ಸದಾನಂದ ಗೌಡರವರು ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಫೆ.20 ರಂದು ಸಂಜೆ ನಿಧನರಾಗಿದರು. ಇವರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇವರ ದೊಡ್ಡಪ್ಪ ಕೇಚೋಡಿ ವೆಂಕಪ್ಪ ಗೌಡ (68ವ)ರವರು ಸದಾನಂದ ಗೌಡ ರವರು ನಿಧನರಾದ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ ಕೆಲ ಹೊತ್ತಿನಲ್ಲೇ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.