ಬಳಂಜ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ ನಾಲ್ಕೂರು ತೆಂಕಕಾರಂದೂರು ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗುರುಪೂಜೆ, ಸರ್ವೇಶ್ವರೀ ದೇವಿಯ ಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ ಹಾಗೂ ರಾಜೋತ್ಸವ ಪ್ರಶಸ್ತಿಯ ಅಭಿನಂದನಾ ಸಮಾರಂಭವು ಫೆ.26 ರಂದು ನಡೆಯಲಿದೆ.
ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ , ಶ್ರೀ ಸರ್ವೇಶ್ವರೀ ದೇವಿಯ ಪೂಜೆ, ಪಂಚಶ್ರೀ ಮಹಿಳಾ ಭಜನಾ ತಂಡ ಬಳಂಜ ಮತ್ತು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇವರಿಂದ ಭಜನಾ ಕಾರ್ಯಕ್ರಮ , ನೂತನ ಅಡುಗೆ ಕೊಠಡಿ ಉದ್ಘಾಟನೆ , ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ನೂತನ ಅಡುಗೆ ಕೊಠಡಿ ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿದಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಐವನ್ ಡಿಸೋಜ, ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗುರುಪ್ರಸಾದ್,ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ,ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.2 ಬೊಳ್ಳಜ್ಜ ಮೂಲಸ್ಥಾನದಲ್ಲಿ ಅಗೇಲು ಸೇವೆ
ನಂಬಿದವರ ಇಷ್ಟಾರ್ಥ ನೇರವೇರಿಸುವ ಬೊಳ್ಳಜ್ಜ ದೈವದ ಸಾರ್ವಜನಿಕ ಅಗೇಲು ಸೇವೆಯು ಫೆ.2 ರಂದು ಆದಿತ್ಯವಾರ ಸಂಜೆ ಗಂಟೆ 6.30 ರಿಂದ ಬೊಳ್ಳಾಜೆ ಮೂಲ ಸ್ಥಾನದಲ್ಲಿ ಜರುಗಲಿದೆ.ಅಗೇಲು ಸೇವೆಗೆ ರೂ. 300 ನಿಗದಿಪಡಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದು ಅಗೇಲು ಸೇವೆ ನೀಡುತ್ತಾರೆ.
ಫೆ.23 ವಾರ್ಷಿಕ ಕ್ರೀಡಾಕೂಟ
ಸಂಘದ ಪೂಜೆಯ ಹಿನ್ನಲೆಯಲ್ಲಿ ಯುವ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಕ್ರೀಡಾಕೂಟ ಬ್ರಹ್ಮಶ್ರೀ- 2025 ಫೆ.23 ರಂದು ನಡೆಯಲಿದೆ. ಪುರುಷರಿಗೆ,ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಕ್ರೀಡೆಗಳು ನಡೆಯಲಿದೆ.