ಬಂದಾರು: ಕುಂಬಾರರ ಸೇವಾ ಸಂಘ, ಶ್ರೀಮರಾಮ ನಗರ ಜೈ ಶ್ರೀರಾಮ್ ಗೆಳೆಯರ ಬಳಗ ವತಿಯಿಂದ ದ.ಕ.ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ ಫೆ.22ರಂದು ಬಂದಾರು ಶ್ರೀ ರಾಮನಗರದಲ್ಲಿ ನಡೆಯಿತು.

ಬಂದಾರು ಕುಂಬಾರ ಸೇವಾ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಕುಂಬಾರರ ಮಹಾಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಗಳೂರು ಕರಾವಳಿ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್,
ಬೆಳ್ತಂಗಡಿ ಕುಂಬಾರರ ಯಾನೆ ಮೂಲ್ಯರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಶುಭಾ ಹಾರೈಸಿದರು. ನಿವೃತ್ತ ಕಂದಾಯ ಅಧಿಕಾರಿ ಪದ್ಮಕುಮಾರ್ ಹೆಚ್, ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ದಾಮೋದರ್, ಕೆರೆಮಜಲು ರವೀಂದ್ರ ಪಾಂಗಣ್ಣಾಯ, ಕುರಿಯಾಳಕೊಪ್ಪ ಲಕ್ಷ್ಮೀ ಜನಾರ್ಧನ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಂಬಾರ, ಜೈ ಶ್ರೀರಾಮ್ ಗೆಳೆಯರ ಬಳಗ ಅಧ್ಯಕ್ಷ ಶ್ರೀಧರ ಬಿ.ಕೆ., ಗುರಿಕಾರರಾದ ಬಾಬು ಕುಂಬಾರ, ಶೀನಪ್ಪ ಕುಂಬಾರ ಹಾಗೂ ಮೊನಪ್ಪ ಕುಂಬಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ರಾಜೇಶ್ ನವಶಕ್ತಿ, ಪ್ರಶಾಂತ್, ರಕ್ಷಿತ್ ಶೆಟ್ಟಿ ಪಣೆಕ್ಕರ, ಮೋಹನ್ ಬಂಗೇರ, ಬಾಲಕೃಷ್ಣ ಗೌಡ ಮುಗೇರಡ್ಕ, ಕುಶಾಲಪ್ಪ ಗೌಡ, ರವಿ ಇಳಂತಿಲ, ದಯಾನಂದ, ತಿಮ್ಮಪ್ಪ ಶೆಟ್ಟಿ, ಹೇಮಂತ್, ರಾಜು , ವಿವಿಧ ಕಡೆಗಳ ಗುರಿಕಾರರು ಸಹಿತ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕ್ರೀಡಾ ಪಟುಗಳಿಗೆ, ಸಾಧಕರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಗಣಹೋಮ, ಸಂಜೆ ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಜರುಗಿ ಸ್ವಜಾತಿ ಬಾಂಧವರ ವಾಲಿಬಾಲ್ ಪಂದ್ಯಾಟ ನಡೆಯಿತು.
ಕ್ರೀಡಾ ಕೂಟ ಸಮಿತಿ ಕಾರ್ಯದರ್ಶಿ ಉದಯ ಬಿ.ಕೆ. ಸ್ವಾಗತಿಸಿ, ದೀಕ್ಷಾ ವಂದಿಸಿ, ವಿಜಯ್ ಕಾರ್ಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.