24 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ “ಬ್ರಹ್ಮಶ್ರೀ- 2025” ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಬೆಳ್ತಂಗಡಿ: ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಮಿತಿ ರಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಸಹಕಾರದೊಂದಿಗೆ ಯುವ ಬಿಲ್ಲವ ವೇದಿಕೆ ಇವರ ನೇತೃತ್ವದಲ್ಲಿ ಫೆ.23 ರಂದು ವಾರ್ಷಿಕ ಕ್ರೀಡಾಕೂಟ ಬ್ರಹ್ಮಶ್ರಿ-2025 ಇದರ ಉದ್ಘಾಟನೆಯು ಸಂಘದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಂಬಳ ಓಟಗಾರ ಸದಾನಂದ ಪೂಜಾರಿ ಅಂತರ ಉದ್ಘಾಟಿಸಿ ಶುಭ ಕೋರಿದರು.

ಬಳಂಜ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಶರತ್ ಅಂಚನ್ ಅಧ್ಯಕ್ಷತೆ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್,ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಾ ಬಂಗೇರ,ಯುವ ಉದ್ಯಮಿಗಳು ಪ್ರಕಾಶ್ ಪೂಜಾರಿ ಬೊಕ್ಕಸ,ನವಮಿ ಕನ್ಸ್ಟ್ರಕ್ಷನ್ ನ ನಾಗೇಶ್ ಪೂಜಾರಿ ಮುಡಲ, ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ರಿ ಇದರ ಅಧ್ಯಕ್ಷ, ಪತ್ರಕರ್ತ ಮನೋಹರ್ ಬಳಂಜ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ, ಪತ್ರಕರ್ತ ಸಂತೋಷ್ ಪಿ ಕೋಟ್ಯಾನ್, ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಭಾರತಿ ಸಂತೋಷ್, ಪ್ರದಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಯುವ ಬಿಲ್ಲವ ವೇದಿಕೆಯ ಪ್ರದಾನ ಕಾರ್ಯದರ್ಶಿ ಲತೇಶ್ ಪೆರಾಜೆ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಮಹಿಳಾ ಬಿಲ್ಲವ ವೇದಿಕೆ ಪೂರ್ವಾಧ್ಯಕ್ಷೆ ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.ಯುವ ಸಾಹಿತಿ ಚಂದ್ರಹಾಸ್ ಬಳಂಜ ವಂದಿಸಿದರು.ಜ್ಯೋತಿ,ಪ್ರತಿಕ್ಷಾ ಪ್ರಾರ್ಥನೆಗೈದರು.

ಸಂಘದ ಆಡಳಿತ ಮಂಡಳಿ ಸದಸ್ಯರಾದ ಬಿ.ಕೃಷ್ಣಪ್ಪ ಪೂಜಾರಿ,ಸಂತೋಷ್ ಕುಮಾರ್ ಕಾಪಿನಡ್ಕ,ಪ್ರವೀಣ್ ಕುಮಾರ್ ಹೆಚ್‌ ಎಸ್, ಪ್ರವೀಣ್ ಡಿ ಕೋಟ್ಯಾನ್,ಯತೀಶ್ ವೈ.ಎಲ್,ದಿನೇಶ್ ಪೂಜಾರಿ ಅಂತರ,ಸದಾನಂದ ಪೂಜಾರಿ ಬೊಂಟ್ರೋಟ್ಟು, ರಂಜಿತ್ ಪೂಜಾರಿ ಮಜಲಡ್ಡ,ಪ್ರದೀಪ್ ಪೂಜಾರಿ ಮೈಂದಕುಮೇರ್,ದಿನೇಶ್ ಕೋಟ್ಯಾನ್ ಕುದ್ರೋಟ್ಟು,ಪ್ರವೀಣ್ ಪೂಜಾರಿ ಲಾಂತ್ಯಾರು,ಯೋಗೀಶ್ ಆರ್ ಯೈಕುರಿ,ಜಗದೀಶ್ ತಾರಿಪಡ್ಪು,ರಕ್ಷಿತ್ ಬಗ್ಯೋಟ್ಟು ಹಾಗೂ ಯುವ ಬಿಲ್ಲವ ವೇದಿಕೆ,ಮಹಿಳಾ ಬಿಲ್ಲವ ವೇದಿಕೆ ಹಾಗೂ ಸಂಘದ ಸದಸ್ಯರು ಸಹಕರಿಸಿದರು.

ಕ್ರೀಡಾಕೂಟದಲ್ಲಿ ಸಮಾಜದ ನೂರಾರು ಯುವಕ,ಯುವತಿಯರು,ಮಕ್ಕಳು, ಹಿರಿಯರು ವಿವಿಧ ಸ್ಪರ್ದೇಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Related posts

ಬೆಳ್ತಂಗಡಿ ಜೈನ್ ಮಿಲನ್ ನ ಮಾಸಿಕ ಸಭೆ

Suddi Udaya

ಬೆಳ್ತಂಗಡಿ:ಫೆ.21ಮತ್ತು24 ವಿದ್ಯುತ್ ನಿಲುಗಡೆ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ಸುರ್ಯ ದೇವಸ್ಥಾನದ ಆನುವಂಶಿಕ ಆಡಳಿತಮೊಕ್ತೇಸರಾಗಿ ಡಾ. ಸತೀಶ್ಚಂದ್ರ ಸುರ್ಯಗುತ್ತು ನೇಮಕ

Suddi Udaya

ರಾಜ್ಯದಲ್ಲಿ ಸ್ವಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಿಜೆಪಿಯ ಯಾವುದೇ ಶಾಸಕರು ಕಾಂಗ್ರೆಸ್‌ ಪಕ್ಷಕೆ ಹೋಗುತ್ತಿಲ್ಲ: ಈಶ್ವರಪ್ಪ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!