23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

ಉಜಿರೆ: ನೀವು ಉದ್ಯಮಶೀಲರಾಬೇಕಾದರೆ ಸಂವಹನ ಕೌಶಲ್ಯ ಇರಬೇಕು, ಒಬ್ಬ ಉದ್ಯಮಿ ಉದ್ಯಮದ ಲಾಭ-ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು. ನೀವು ಆರಂಭಿಸುವ ಉದ್ಯಮಕ್ಕೆ ಒಂದು ಸರಿಯಾದ ದೃಷ್ಟಿಕೋನ ಇರಬೇಕು. ಪ್ರಾಮಾಣಿಕತೆ ಇರಬೇಕು. ನಿಮ್ಮ ಸ್ವಷ್ಟವಾದ ಗುರಿ, ಉದ್ದೇಶ ಇದ್ದು, ನೀವು ಪ್ರಾಮಾಣಿಕರಾಗಿದ್ದರೆ ನಿಮಗೆ ಬೇರೆ ಬೇರೆ ಮೂಲಗಳಿಂದ ಹಣಕಾಸು ನೆರವು ಬರುತ್ತದೆ. ಇದರ ಜೊತೆಗೆ ಹಣಕಾಸಿನ ನಿರ್ವಹಣೆ ಅಂದರೆ ಸರಿಯಾದ ಲೆಕ್ಕಚಾರ ನೀವು ಇಟ್ಟುಕೊಳ್ಳಬೇಕು. ಇನ್ನು ಉದ್ಯಮಕ್ಕೆ ಬೇಕಾಗುವ ಕೆಲಸಗಾರನ್ನು ನೇಮಿಸಿಕೊಳ್ಳವಾಗ ಅಭ್ಯರ್ಥಿಯ ಮನೋಭಾವನೆಯನ್ನು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ. ಹಂತ ಹಂತವಾಗಿ ಬಂಡವಾಳವನ್ನು ತೊಡಗಿಸಿಕೊಂಡು ಮುಂದುವರೆಯರಿ. ಉದ್ಯಮಶೀಲರಾಗಬೇಕಾದರೆ ಕೇವಲ ಜ್ಞಾನ ಅಥವಾ ಐದಿಯಾ ಇದ್ದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರುವ ಜಾಣ್ಮೆ ಇರಬೇಕು. ಉದ್ಯಮದ ಮೊದಲ ಗ್ರಾಹಕರನ್ನು ಯಾವುತ್ತೂ ಮರೆಯಬೇಡಿ ಯಾಕೆಂದರೆ ಅವರು ನಿಮ್ಮ ಮೇಲೆ ಮೊದಲು ನಂಬಿಕೆ ಇಟ್ಟಿವರು ಎಂದು ನಿಡ್ಲೆ ಅಗ್ರಿಲೀಫ್ ಎಕ್ಸಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಅವಿನಾಶ್ ರಾವ್ ಅಭಿಪ್ರಾಯಪಟ್ಟರು.

ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಶೋಕ ಕುಮಾರ್ ಮಾತನಾಡಿ ಸ್ವ ಉದ್ಯೋಗಕ್ಕೆ ಬೇಕಾದ ಮಾಹಿತಿ ಮಾರ್ಗದರ್ಶನ ನೀಡಿದ ರುಡ್ ಸೆಟ್ ಸಂಸ್ಥೆಯ ಕಾರ್ಯವನ್ನು ಅಭಿನಂದಿಸಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಡಿ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನವನ್ನು ಸಹ ನೆನಪಿಸಿಕೊಂಡು.

ಕು. ಕೀರ್ತನಾ ಮತ್ತು ಕು. ಪ್ರತಿಷ್ಟಾ ಪ್ರಾರ್ಥಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು ೩೩ ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಶ್ರೀಮತಿ ಮಾಲಿನಿ ಮತ್ತು ರಮಾನಂದ ಗುಡ್ಡಾಜೆ ಇವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

Suddi Udaya

ಅಳದಂಗಡಿಯಲ್ಲಿ ಬೈಕ್ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾವು

Suddi Udaya

ಅಳದಂಗಡಿ ಶ್ರೀ‌ ಸತ್ಯಸಾರಮುಪ್ಪಣ್ಯ ದೈವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ

Suddi Udaya

ಉಜಿರೆ: ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ಸೇತುವೆ ಶಿಥಿಲ: ಘನ ವಾಹನಗಳ ಸಂಚಾರ ನಿಷೇಧ: ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸುವಂತೆ ಸೂಚನೆ

Suddi Udaya

ಹೊಸಂಗಡಿ ಗ್ರಾ.ಪಂ. ನ ನೇತೃತ್ವದಲ್ಲಿ ಕುರ್ಲೋಟ್ಟು ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya
error: Content is protected !!