September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

ಕುವೆಟ್ಟು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು ಎಸ್ ಡಿ ಎಂ ಸಿ ಸಮನ್ವಯ ವೇದಿಕೆ, ಶಾಲಾ ಎಸ್ ಡಿ ಎಂ ಸಿ ಹಾಗೂ ಎ ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಶಾಲಾ ವಿದ್ಯಾರ್ಥಿಗಳ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ ಜರುಗಿತು.


ಎ ಜೆ ಆಸ್ಪತ್ರೆಯ ವೈದ್ಯರಾದ ಡಾ ಶಿಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಿರಾಜ್ ಎಂ ಚಿಲಿಂಬಿ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಉಮರ್ ಫಾರೂಕ್, ಗುರುವಾಯನಕೆರೆ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹಾಜಿ ಲತೀಫ್, ಪಿಲಿಚಂಡಿಕಲ್ಲು ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುಸ್ತಫಾ, ಪಡಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಐಶ್ವರ್ಯ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್, ಶಾಲಾ ನಾಯಕಿ ಶಿವಾನಿ ಹಾಗೂ ಶಾಲಾ ಆರೋಗ್ಯ ಮಂತ್ರಿ ಮುಫೀದಾ ಬಾನು ಉಪಸ್ಥಿತರಿದ್ದರು.

102 ವಿದ್ಯಾರ್ಥಿಗಳು 5 ಮಂದಿ ಎಸ್ ಡಿ ಎಂ ಸಿ ಸದಸ್ಯರು ಚಿಕಿತ್ಸೆ ಪ್ರಯೋಜನ ಪಡೆದರು. ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ಸ್ವಾಗತಿಸಿ, ದೈಹಿಕ ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು.

Related posts

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಪ್ರೇರಣಾ ಶಿಬಿರದ ಉದ್ಘಾಟನೆ

Suddi Udaya

ಗುಂಡೂರಿ: ಶ್ರೀಮತಿ ಶಾಂತ ನಿಧನ

Suddi Udaya

ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾ‌ರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಓಡೀಲು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉಡುಪಿ ಪೇಜಾವರ ಸ್ವಾಮೀಜಿ ಬೇಟಿ

Suddi Udaya

ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನ ; ಓರ್ವ ಆರೋಪಿ ಬಂಧನ

Suddi Udaya
error: Content is protected !!