ಮಿತ್ತಬಾಗಿಲು: ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನ ಮಹಾ ಶಿವರಾತ್ರಿಯ ದಿನದಂದು ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವತಿಯಿಂದ ಕುಕ್ಕಾವು ಸೇತುವೆ ಬಳಿ ಧ್ಯಾನಸಕ್ತ ಸದಾಶಿವನ ೧೨ ಅಡಿ ಎತ್ತರದ ಪ್ರತಿಮೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರಿಸ್ ಕನಸಿನ ಮನೆ ಮಾಲೀಕರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಹಾಗೂ ಬದುಕು ಕಟ್ಟೋಣ ಬನ್ನಿ ತಂಡದ ಅಧ್ಯಕ್ಷ ಬಿ.ಕೆ ಧನಂಜಯ್ ರಾವ್ ಇವರು ಫೆ.26ರಂದು ಲೋಕಾರ್ಪಣೆಗೊಳಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಮಿತ್ತಬಾಗಿಲು, ಭುಜಬಲಿ ಧರ್ಮಸ್ಥಳ, ಶಿವರಾತ್ರಿ ಉತ್ಸವ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ವಳಂಬ್ರ, ಮಿತ್ತಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯ್ ಕುಮಾರ್, ಭಜನಾ ಸಮಿತಿ ಸಂಚಾಲಕ ಗಣೇಶ್ ಗೌಡ ಪಗರೆ, ಶ್ರೀ ದುರ್ಗಾ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಕುಂಬಾರ, ಕೂಡಬೆಟ್ಟು ಶಿವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಎಂ.ಎಸ್, ಕಾರ್ಯಾಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ಚಂದ್ರಯ್ಯ ಕುಂಬಾರ, ಮಿತ್ತಬಾಗಿಲು ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಕುಮಾರ್, ವಾಸುದೇವ ರಾವ್ ಕಕ್ಕೇನೆಜಿ ಉಪ ಸಮಿತಿಯ ಮುಖ್ಯಸ್ಥರು ಅರ್ಚಕ ವೃಂದ ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.