ಸ್ಪರ್ ರಸ್ತೆಯಾಗಿ ಮೇಲ್ದರ್ಜೆಗೆ ಏರಿದ್ದು ಅಭಿವೃದ್ಧಿ ಹೊಂದಲಿರುವ ಉಜಿರೆ- ಪೆರಿಯಶಾಂತಿ ನಡುವಿನ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದ್ದು ಇದರ ಒಂದೊಂದೇ ಹಂತದ ಸಮೀಕ್ಷೆಗಳು ನಡೆಯುತ್ತಿದ್ದು, ಉಜಿರೆಯಿಂದ ಧರ್ಮಸ್ಥಳ ತನಕ ರಸ್ತೆ ಅಭಿವೃದ್ಧಿಗೆ ತೆರವುಗೊಳ್ಳಲಿರುವ ಖಾಸಗಿ ಜಾಗಗಳಲ್ಲಿರುವ ಮರಗಳ ಸಮೀಕ್ಷೆ ನಡೆಯುತ್ತಿದೆ.
ಕೆಲವೆಡೆ ಚತುಷ್ಪಥ, ಕೆಲವೆಡೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿರುವ ಈ ರಸ್ತೆಯ ಅಭಿವೃದ್ಧಿ ವೇಳೆ ಹಲವು ಮರಗಳು ತೆರವುಗೊಳ್ಳಬೇಕಿದೆ. ಇದರ ಪ್ರಥಮ ಅಂಗವಾಗಿ ಖಾಸಗಿ ಜಾಗದಲ್ಲಿರುವ ಮರಗಳನ್ನು ಗುರುತಿಸಲಾಗುತ್ತಿದೆ. ತೆರವುಗೊಳ್ಳುವ ಪ್ರತಿ ಮರಕ್ಕೆ ಮೌಲ್ಯ ನಿಗದಿಪಡಿಸಿಕಟಾವಿನ ವೇಳೆ ಸ್ಥಳದ ಮಾಲೀಕರಿಗೆ ನೀಡಲಾಗುತ್ತದೆ.
ಸಮೀಕ್ಷೆ ಕಾರ್ಯದಲ್ಲಿ ಭೂಸ್ವಾಧೀನ ಅಧಿಕಾರಿ ಕಚೇರಿಯ ಆರ್ ಐ ನವೀನ್ ಕುಮಾರ್, ಸರ್ವೆಯರ್ ಕೃಷ್ಣಪ್ರಸಾದ್,ಬೆಳ್ತಂಗಡಿ ಅರಣ್ಯ ವಲಯದ ಡಿಆರ್ ಎಫ್ ಒ ರವಿಚಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.