ಬೆಳ್ತಂಗಡಿ: ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷೆಯ ವಿಭಾಗದಿಂದ ಜಾರ್ಜ್ ಒರ್ವೆಲ್ ಅವರ ಕಾದಂಬರಿ ,ಆಧಾರಿತ “ಅನಿಮಲ್ ಫಾರ್ಮ್”ಎಂಬ ಚಲನ ಚಿತ್ರ ಪ್ರದರ್ಶನ ಫೆ.28 ರಂದು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ| ಸವಿತಾ ಹಾಗೂ ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಬಿ ಎ ಶಮಿಯುಲ್ಲ ವೇದಿಕೆಯಲ್ಲಿ ಇದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆಂಗ್ಲ ಭಾಷಾ ಉಪನ್ಯಾಸಕರಾದ ಸುಜಿತ್ ಸ್ವಾಗತಿಸಿದರು.