25.6 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿ ಪೂಜೆೋತ್ಸವ

ಲಾಯಿಲ : ಅಶ್ವತ್ಥಕಟ್ಟೆ, ಶ್ರೀ ಕ್ಷೇತ್ರ ಪುತ್ರಬೈಲು, ಲಾಯಿಲದ ಶ್ರೀ ಮಹಾಮ್ಮಾಯಿ ಅಮ್ಮನವರು ಹಾಗೂ ಪರಿವಾರ ಶಕ್ತಿಗಳ ಸ್ಥಳ ಸಾನಿಧ್ಯದಲ್ಲಿ ಶ್ರೀ ಮಹಾಮ್ಮಾಯಿ ಅಮ್ಮನವರ ಮಾರಿ ಪೂಜೆೋತ್ಸವ ಫೆ.27, 28 ರಂದು ನಡೆಯಿತು.

ಫೆ.27 ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನ ಹಾಗೂ ಪರಿವಾರ ಶಕ್ತಿಗಳ ಸಾನ್ನಿಧ್ಯದಲ್ಲಿ ಶುದ್ಧಿ ಕಲಶ, ಸಾನ್ನಿಧ್ಯ ಶುದ್ಧಿ, ಗಣಪತಿ ಹೋಮ, ಫೆ.28 ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಿಂದ ದೇವಿಯ ಉತ್ಸವಮೂರ್ತಿ ಹಾಗೂ ಪರಿವಾರ ಶಕ್ತಿಗಳ ಭಂಡಾರವು ಪೂರ್ಣಕುಂಭ, ಕಲಶ, ಚೆಂಡೆ, ಕೊಂಬು, ವಾಲಗ, ಸಿಡಿಮದ್ದಿನ ಪ್ರದರ್ಶನದೊಂದಿಗೆ, ವೈಭವಪೂರ್ಣ ಮೆರವಣಿಗೆಯೊಂದಿಗೆ ಗಡಿವಾಡು ಸ್ಥಳಕ್ಕೆ ತೆರಳಿ ಪುನಃ ಅಶ್ವತ್ಥಕಟ್ಟೆಯಲ್ಲಿ ಶ್ರೀ ಅಮ್ಮನವರು ಹಾಗೂ ಸ್ಥಳ ಸಾನ್ನಿಧ್ಯದಲ್ಲಿ ಚಾಮುಂಡೇಶ್ವರಿ, ಉಚ್ಚೆಂಗಿ ಹಾಗೂ ಕ್ಷೇತ್ರಪಾಲಕ ಗುಳಿಗ, ಪರಿವಾರ ಶಕ್ತಿಗಳು ಅಲಂಕರಿಸಿ ಮಾರಿಪೂಜೋತ್ಸವ ನಡೆಯಿತು. ಈ ವೇಳೆ ಸದಾನಂದ ಬಿ. ಮುಂಡಾಜೆ ಇವರ ಸಾರಥ್ಯದಲ್ಲಿ ವಿನೂತನ ಶೈಲಿಯಲ್ಲಿ ಕೀರ್ತನಾ ಕಲಾತಂಡ (ರಿ.) ಮುಂಡಾಜೆ ಇವರಿಂದ ಭಕ್ತಿ-ಗಾನ-ಯಕ್ಷ ನೃತ್ಯ ವೈಭವ ಹಾಗೂ ರಾತ್ರಿ ಸ್ಥಳೀಯ ಮಕ್ಕಳು ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಈಶ್ವರ ಭೈರ, ಅಧ್ಯಕ್ಷ ಮೋಹನ್ ದಾಸ್ ಬೈರ. ಉಪಾಧ್ಯಕ್ಷ ವಿ ಎಸ್ ಸುರೇಶ್. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಲಾಯಿಲ, ಕಾರ್ಯದರ್ಶಿ ಕೃಷ್ಣಪ್ಪ ಸಿ . ಕೋಶಾಧಿಕಾರಿ ಎಚ್ ಬಿ ಸೀತಾರಾಮ್, ಜೊತೆ ಕಾರ್ಯದರ್ಶಿ ಎನ್‌ಕೆ ಸುಂದರ ಟ್ರಸ್ಟ್ ಕಾರ್ಯದರ್ಶಿ ರಮೇಶ್ ವಿ ಎಸ್. ಸಮಿತಿಯ ಸಲಹೆಗಾರರು ಸರ್ವ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‍ನಿಂದ ಸಿಹಿತಿಂಡಿ ವಿತರಣೆ

Suddi Udaya

ಉಜಿರೆ: ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಹೊಸಂಗಡಿ ಗ್ರಾ.ಪಂ. ನಲ್ಲಿ ಆರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಮುಂಡಾಜೆ: ನೀಲಮ್ಮ ನಾಯ್ಕ ನಿಧನ

Suddi Udaya
error: Content is protected !!