26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಪಡಂಗಡಿ: ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕಣಿಯೂರು ನಿವಾಸಿ ವಿವಾಹಿತ ಮಹಿಳೆಯೋರ್ವರು ಬೆಂಗಳೂರು ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ (23 ) ಮೃತಪಟ್ಟಾಕೆ.

ಪೂಜಾ ಅವರು ವಿದ್ಯಾವಂತೆಯಾಗಿದ್ದು ಉದ್ಯೋಗ ಅರಸಿ ಕಳೆದ 2 ತಿಂಗಳ ಹಿಂದೆ ಬೆಂಗಳೂರಿಗೆ ತೆರಳುವವರಿದ್ದರು. ಅವರನ್ನು ತಮ್ಮ ಸಂಬಂಧಿಕರ ಮನೆ ಬೆಂಗಳೂರಿಗೆ ಪತಿ ಪ್ರಕಾಶ್ ಕಳುಹಿಸಿಕೊಟ್ಟಿದ್ದರು. ಪತಿ ಪ್ರಕಾಶ್ ಬದ್ಯಾರು ಬರಾಯ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ಪೂಜಾ ಅವರು ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜಾ ಹಾಗೂ ಸೇಸಪ್ಪ ಪೂಜಾರಿ ದಂಪತಿy ಪುತ್ರಿಯಾಗಿದ್ದು 10 ತಿಂಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದಾರು. ಮೃತಳ ಸಾವಿನ ಬಗ್ಗೆ ಸಂಶಯಾಸ್ಪದವಾಗಿದೆ ಎಂದು ತಾಯಿ, ತಂದೆ ಅಭಿಪ್ರಾಯ ಪಟ್ಟು ಮನೆಯಲ್ಲೆ ಅಂತ್ಯಕ್ರಿಯೆ ನಡೆಸಿದ್ದರು.

ಬೆಂಗಳೂರು ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೊಯ್ಯೂರು ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಸೇವೆ

Suddi Udaya

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ‌ ಪರ್ವ-2024 ಉದ್ಘಾಟನೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ಕನ್ಯಾಡಿ || : ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

“ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಆಡಳಿತ ನೀಡಲಿ – ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯಗಳು”: ಅನಿಲ್ ಕುಮಾರ್ ಯು

Suddi Udaya
error: Content is protected !!