ಬೆಳ್ತಂಗಡಿ:ಫೆ. 28 ರಂದು ಸಂಜೆ ಬೆಳ್ತಂಗಡಿ ಪರಿಸರದಲ್ಲಿ ಮುಹಮ್ಮದ್ ಬಂದಾರು ರವರ ಮೊಬೈಲ್ ಕಳೆದು ಹೋಗಿದ್ದು, ಮಾ.3 ರಂದು ಸಂತೆಕಟ್ಟೆ ಬಳಿ ಇರುವ ಗಣೇಶ್ ಮೆಡಿಕಲ್ ಮಾಲೀಕರು ಕಳೆದುಕೊಂಡರ ಮೊಬೈಲ್ ನಿಂದ ಬರುತ್ತಿದ್ದ ಕರೆ ಸ್ವೀಕರಿಸಿ ನಿಮ್ಮ ಮೋಬೈಲ್ ಯಾರೋ ಇಲ್ಲಿ ಕೊಟ್ಟಿರುವ ವಿಷಯ ತಿಳಿಸಿದರು. ಕೂಡಲೇ ಮುಹಮ್ಮದ್ ರವರು ಬೆಳ್ತಂಗಡಿ ಹೋಗಿ ಮೊಬೈಲ್ ಪಡೆದುಕೊಂಡಿದ್ದಾರೆ. ಗಣೇಶ್ ಮೆಡಿಕಲ್ ಮಾಲೀಕರ ಈ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.