40.1 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಟರ್ಮ್ ಇನ್ಶೂರೆನ್ಸ್ ” ಕುರಿತು ಮಾಹಿತಿ ಕಾರ್ಯಾಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಡೆಸುತ್ತಿರುವ ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜು ಇಲ್ಲಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಗೆ ಆರ್ಥಿಕ ರಕ್ಷಣೆಯನ್ನು ನೀಡುವ ಟರ್ಮ್ ಇನ್ಶೂರೆನ್ಸ್ ನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂಬ ನಿಟ್ಟಿನಲ್ಲಿ ” ಟರ್ಮ್ ಇನ್ಶೂರೆನ್ಸ್” ಕುರಿತು ಮಾಹಿತಿ ಕಾರ್ಯಗಾರವು ಮಾ.05 ರಂದು ನಡೆಯಿತು.

ಕಾರ್ಯಗಾರದಲ್ಲಿ ಟರ್ಮ್ ಇನ್ಶೂರೆನ್ಸ್ ನ ಮಹತ್ವ , ವಿಮೆಯ ಉಪಯೋಗ , ಟರ್ಮ್ ವಿಮಾ ವಯಸ್ಸಿನ ಮಿತಿ ಮತ್ತು ಇತರ ಅವಶ್ಯಕತೆಗಳ ಪ್ರಾಮುಖ್ಯತೆ, ವಿಭಿನ್ನ ರೀತಿಯ ನೀತಿಗಳು , ತೀವ್ರ ಅನಾರೋಗ್ಯ ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿತ್ತು. ಅದರೊಂದಿಗೆ ಪಾಲಿಸಿ ಬಜಾರ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ವಿಮೆಯನ್ನು ಖರೀದಿಸುವ ಲೈವ್ ಸೆಷನ್ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಸಂಸ್ಥೆಯ ಸಂಯೋಜಕರಾದ ಯಶವಂತ ಜಿ ನಾಯಕ್ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.
ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಪದವಿ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ.ಎ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ. ಎ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.

Related posts

ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣ: ಆರೋಪಿ ಗದಗದ ರಾಜುಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ; ಪ್ರತಿಭಾ ಪುರಸ್ಕಾರ

Suddi Udaya

ಕಲ್ಮಂಜ 87 ವಾರ್ಡಿನಲ್ಲಿ ಒಂಬತ್ತು ನಾರಿಮಣಿಗಳಿಂದ ಪ್ರಥಮ ಮತ ಚಲಾವಣೆ

Suddi Udaya

ಜ.15: ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ’ ಶಿಬಿರ

Suddi Udaya

ಮರೋಡಿ: ಮಾವಿನಕಟ್ಟೆಯಲ್ಲಿ ಭಾರೀ ಮಳೆಗೆ ಭೂಕುಸಿತ

Suddi Udaya

ಸುಲ್ಕೇರಿ ಮಹಾಮಾಯಿ ದೇವಸ್ಥಾನಕ್ಕೆ ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಿಂದ ಚೆಂಡೆ, ದೀಪಾ, ಮತ್ತು ಕಹಳೆ ಸಮರ್ಪಣೆ

Suddi Udaya
error: Content is protected !!