
ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಅಭಿವೃದ್ಧಿಯ ಕಾರ್ಯದಲಿದ್ದು, ಹಳೆ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಯ ಮರು ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ.
ಈ ವೇಳೆ ಪುತ್ತೂರು ಮಾಸ್ಟರ್ ಪ್ಲಾನರಿಯ ಅರ್ಜುನ್, ಅಕ್ಷಯ್, ಮ್ಯಾನೇಜರ್ ಪ್ರಭಾಕರ ರವರು ಶಾಲೆಗೆ ಭೇಟಿ ನೀಡಿ ಶಾಲೆಯ ಮರು ನಿರ್ಮಾಣ ಕಾರ್ಯದ ಕೆಲಸವನ್ನು ವಿಕ್ಷೀಸಿದರು.

ಈ ಸಂದರ್ಭದಲ್ಲಿ ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಶಿಶಿಲ ಗ್ರಾ. ಪಂ. ಅಧ್ಯಕ್ಷ ಸುಧೀನ್ ಡಿ., ಎಸ್ ಡಿ ಎಮ್ ಸಿ ಅಧ್ಯಕ್ಷ ಮೋಹನ್ ಗೌಡ, ರಾಧಾಕೃಷ್ಣ ಗುತ್ತು, ಮುಖ್ಯ ಶಿಕ್ಷಕಿ ರತ್ನಾ. ಬಿ., ರಾಕೇಶ್ ಉಪಸ್ಥಿತರಿದ್ದು, ಶಾಲೆಯ ನೂತನ ಕೊಠಡಿಯ ನಿರ್ಮಾಣ ಬಗ್ಗೆ ಮಾಹಿತಿಯನ್ನು ನೀಡಿದರು.