ಗೇರುಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ಮಾ.7ರಂದು ರಾತ್ರಿ ನಡೆದಿದೆ.

ರಾತ್ರಿಯ ವೇಳೆ ಲೋಡ್ ತುಂಬಿಸಿಕೊಂಡು ಬರುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದ್ದು, ಲಾರಿ ಜಖಂ ಗೊಂಡಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.