31.3 C
ಪುತ್ತೂರು, ಬೆಳ್ತಂಗಡಿ
May 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಹಿಳಾ ದಿನಾಚರಣೆ

ಉಜಿರೆ: “ಸ್ತ್ರೀಯರು ತಮ್ಮ ಪ್ರೀತಿಪಾತ್ರರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಉತ್ತಮ” ಎಂದು ಉಜಿರೆ ಎಸ್.ಡಿ.ಎಮ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕಾ ಜಯದೇವ್ ಹೇಳಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.

ಇನ್ನೊರ್ವ ಅತಿಥಿಯಾಗಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಕಿಂಡರ್ಗಾರ್ಟನ್ ವಿಭಾಗದ ಸಂಯೋಜಕ ಶಿಕ್ಷಕಿ ಸ್ಮೃತಿ ಜೈನ್ ಮಹಿಳೆಯರ ಸಾಮರ್ಥ್ಯದ ಬಗ್ಗೆ ಮಾತನಾಡಿದರು.

ಶಿಕ್ಷಕಿ ಚೇತನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಶೋಭಿತ ವಂದಿಸಿದರು.

Related posts

ಬೆಳಾಲು : ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

Suddi Udaya

ಗೇರುಕಟ್ಟೆ : ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ. ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಭಾಗಿ

Suddi Udaya

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ವಲಯ ಬಂಟರ ಸಂಘ, ಉಜಿರೆ ಹಾಗೂ ಬಂಟರ ಗ್ರಾಮ ಸಮಿತಿ ಉಜಿರೆ ಮುಂಡಾಜೆ ಮತ್ತು ತೋಟತ್ತಾಡಿ ಇವುಗಳ ಸಹಭಾಗಿತ್ವದಲ್ಲಿ ಉಜಿರೆ ವಲಯ ಬಂಟರ ಕ್ರೀಡಾಕೂಟ

Suddi Udaya

ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.89.65 ಫಲಿತಾಂಶ

Suddi Udaya

ಬೆಳ್ತಂಗಡಿ: ಹೊತ್ತಿ ಉರಿದ ಬೈಕ್ : ವಾರೀಸುದಾರು  ಹಾಗೂ ನಂಬರ್  ಪ್ಲೇಟ್  ಇಲ್ಲದ ಬೈಕ್ ಮೇಲೆ ಅನುಮಾನ

Suddi Udaya
error: Content is protected !!