May 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಹಿರಿಯ ಯಕ್ಷಗಾನ ಕಲಾವಿದ ಬಿ. ಗೋಪಾಲಕೃಷ್ಣ ನಿಧನ

ಬೆಳ್ತಂಗಡಿ: ಯಕ್ಷಗಾನ ಮತ್ತು ಚೆಂಡೆ-ಮದ್ದಲೆ ಕಲಾವಿದ, ಯಕ್ಷಗುರು ಬಿ. ಗೋಪಾಲಕೃಷ್ಣ ಕುರುಪ್ (90) ಕಾಸರಗೊಡಿನ ನೀಲೇಶ್ವದ ಪಟ್ಟೇನದಲ್ಲಿ ಮಾ.18 ರಂದು ರಾತ್ರಿ ನಿಧನರಾಗಿದ್ದಾರೆ.

ಕೇರಳ ಮೂಲದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಚೆಂಡೆ ಮತ್ತು ಮದ್ದಲೆಯ ತಾಳ-ಲಯವನ್ನು ಮೈಗೂಡಿಸಿಕೊಂಡಿದ್ದ ಕುರುಪ್ ಅವರು ತೆಂಕು ತಿಟ್ಟಿನಲ್ಲಿ ಲಭ್ಯವಿರುವ ಅಧಿಕೃತ ಪಠ್ಯವನ್ನು ಬಳಸಿ ಪುಸ್ತಕಗಳನ್ನು ಬರೆದಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ್ದರು. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿ ಹೆಸರು ಗಳಿಸಿದ್ದರು.

Related posts

ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

Suddi Udaya

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ಮಾಲಾಡಿ: ಕೊಲ್ಪೆದಬೈಲುನಲ್ಲಿ ಹಾಡಹಾಗಲೇ ಮನೆಗೆ ನುಗ್ಗಿದ್ದ ಕಳ್ಳರು: ಚಿನ್ನಾಭರಣ ಸೇರಿ ನಗದು ಕಳವು

Suddi Udaya

ಬಿಜೆಪಿ‌ ಅಲ್ಪಸಂಖ್ಯಾತ ಮೋರ್ಚಾದಿಂದ ಶಾಸಕರ ಹುಟ್ಟುಹಬ್ಬ ಆಚರಣೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಬಾಡಿಗೆದಾರರಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!