ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

ಬೆಳ್ತಂಗಡಿ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸರಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನವರು ಎರಡು ವಾಲಿಬಾಲ್ ಹಾಗೂ 2 ತ್ರೋಬಾಲ್ ಪೋಲ್ ಗಳನ್ನು ಕೊಡುಗೆಯಾಗಿ ನೀಡಿದರು.

ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಶರುಣ್ ಪಿಂಟೋ ಹಾಗೂ ಸಿಬ್ಬಂದಿ ರಾಜೇಶ್ ಇವರು ನೇಲ್ಯಡ್ಕಕ್ಕೆ ಆಗಮಿಸಿ ಈ ಕೊಡುಗೆಯನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಸರಕಾರಿ ಪ್ರೌಢಶಾಲೆಗೆ ಶಾಶ್ವತ ಕೊಡುಗೆಯನ್ನು ನೀಡಿದ ಎಂಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.


ಎಸ್ ಡಿ ಎಂ ಸಿ ಯ ಯಶವಂತ ಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ನಿರೂಪಿಸಿ, ಅರವಿಂದ ಗೋಖಲೆ ಸ್ವಾಗತಿಸಿ ಉದಯಕುಮಾರ್ ವಂದಿಸಿದರು.

ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ವಾಣಿ ಕಾಲೇಜು ಎದುರು ಸ್ಕೂಟಿ ಮತ್ತು ಗೂಡ್ಸ್ ಲಾರಿ ಡಿಕ್ಕಿ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಮಾಲೋಚನಾ ಸಭೆ: ಜನಜಾಗೃತಿ ವೇದಿಕೆ ಮೂಲಕ ಧರ್ಮಸ್ಥಳದಿಂದ ಆಗಿರುವ ಪರಿವರ್ತನೆ ಅಪರಿಮಿತ: ಪ್ರತಾಪ ಸಿಂಹ ನಾಯಕ್

Suddi Udaya

ಬಂದಾರು: ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ವಾಸ್ತುಶಿಲ್ಪಿ ಪ್ರಸಾದ್ ಮುನಿಯoಗಳರವರು ಭೇಟಿ: ಕಾಮಗಾರಿಯ ಬಗ್ಗೆ ಸಮಾಲೋಚನೆ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ’ ಪ್ರಶಸ್ತಿ

Suddi Udaya

ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ

Suddi Udaya

ತೆಕ್ಕಾರು ಬಟ್ರಬೈಲು ದೇವರಗುಡ್ಡೆ ಶೀ ಗೋಪಾಲಕೃಷ್ಣದಲ್ಲಿ ಮಾಡಾವು ವೆಂಕಟ್ರಮಣ ಭಟ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ

Suddi Udaya
error: Content is protected !!