ಬೆಳ್ತಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದ ಸಾಂಪ್ರಾದಾಯಿಕ ಭತ್ತದ ತಳಿ ಸಂರಕ್ಷಣೆ ಮಾಡುತ್ತಿರುವ ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಬಿ.ಕೆ. ದೇವರಾವ್ ಅವರಿಗೆ ಮಾ.19 ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳ ೯ ಸಾಧಕರಿಗೆ ಇತ್ತಿಚೇಗೆ ಪ್ರಶಸ್ತಿ ಘೋಷಿಸಿದ್ದು 2024ನೇ ಕೃಷಿ ಜನಪದ ಕ್ಷೇತ್ರದ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಬಿ.ಕೆ ದೇವರಾಜ್ ಆಯ್ಕೆಯಾಗಿದ್ದರು.