
ಬೆಳ್ತಂಗಡಿ: ಇಲ್ಲಿಯ ಚರ್ಚ್ ರೋಡ್‌ಯ ಕಲ್ಕಣಿ ಎಂಬಲ್ಲಿ ಬೈಕೊಂದು ಕಾರನ್ನು ಓವರ್‌ಟೆಕ್ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ, ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಸಾವನ್ನಪ್ಪಿದ ದುರ್ಘಟನೆ ಮಾ.26 ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕಲ್ಲಗುಡ್ಡೆ ಸಮೀಪದ ಟ್ರೀಪಾರ್ಕ್‌ಗೆ ಹೋಗುವ ರಸ್ತೆಯ ನಿವಾಸಿ ಸಯ್ಯದ್ ಸರ್ವರ್ ಪಾಶ( 42.ವ) ಈ ದುರ್ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದಾರೆ. ಸಯ್ಯದ್ ಪಾಶ ಅವರು ತಮ್ಮ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕಲ್ಕಣಿ ಬಳಿಯಲ್ಲಿ ಕಾರನ್ನು ಓವರ್‌ಟೇಕ್ ಮಾಡುವ ಯತ್ನದಲ್ಲಿ ಅಪಘಾತ ಸಂಭವಿಸಿತು. ಈ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ಸವಾರ ರಸ್ತೆ ಬದಿಯ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡರು, ಕೂಡಲೇ ಸ್ಥಳೀಯರು ಸೇರಿ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಬೆಳ್ತಂಗಡಿ ಜಮಾತ್ ಸದಸ್ಯ ಇಸುಬು ರವರ ಕಿರಿಯ ಮಗಳ ಗಂಡನಾಗಿದ್ದಾರೆ.