26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ವೈಭವ

ಬೆಳ್ತಂಗಡಿ: ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ. 28 ರಂದು ಕಾಲೇಜಿನ ಕನ್ನಡ ವಿಭಾಗದಿಂದ ಜಾನಪದ ವೈಭವ 2025 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ.ರವರು ಉದ್ಘಾಟಿಸುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಅಧ್ಯಾಪಕರಾದ ಡಾ. ಶರತ್ ಕುಮಾರ್ ಟಿ. ಕೆ.ಭಾಗವಹಿಸಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಮಾರುತಿ ಜಿ. ಇವರು ಪ್ರಾಸ್ತಾವಿಕ ನುಡಿಯನ್ನು ನುಡಿದರು. ಪ್ರೊ. ಸುಧಾರಾಣಿ ಸ್ವಾಗತಿಸಿದರು. ಪ್ರೊ. ಪದ್ಮನಾಭ, ಪ್ರೊ. ರೊನಾಲ್ಡೊ ಪ್ರವೀಣ್ ಕೊರೆಯಾ ಅತಿಥಿಗಳಾಗಿ ಭಾಗವಹಿಸಿದ್ದರು.

ಜಾನಪದ ವೈಭವ- 2025 ಕಾರ್ಯಕ್ರಮದಲ್ಲಿ ಜನಪದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, 10 ತಂಡಗಳಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಜಾನಪದ ಮೆರುಗನ್ನು ಮೆರೆಯುವ ಜನಪದ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸುಚಿತ್ರಾ ನಡೆಸಿಕೊಟ್ಟರು.

Related posts

ಉಜಿರೆ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ( ಸಿ.ಬಿ.ಎಸ್‌.ಇ ) ಯಲ್ಲಿ ಶಿಕ್ಷಕರಿಗೆ ಯೋಗ ತರಬೇತಿ

Suddi Udaya

ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ಕಳಿಯ : ಬಾಕಿಮಾರು ಮನೆಯ ಸುರೇಶ್ ಗೌಡ ನಿಧನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿಗಳು ಎಲ್ ಐ ಸಿ 67ನೇ ಸಪ್ತಹದಲ್ಲಿ ಹಲವಾರು ಪ್ರಶಸ್ತಿಗಳು

Suddi Udaya

ವೇಣೂರು: ನಿವೃತ್ತ ಶಿಕ್ಷಕರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

Suddi Udaya
error: Content is protected !!