October 15, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜಾರಿಗೆ ಬೈಲು: ಅಕ್ರಮ ಗೋ ಸಾಗಟ :ರಾಷ್ಟ್ರೀಯ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರಿಂದ ಕಾರ್ಯಾಚರಣೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋ ಸಾಗಾಟ ನಡೆಸಲು ಹೊರಟ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಇಂದು ಬೆಳ್ಳಂಬೆಳಗ್ಗೆ ಜಾನುವಾರು ಸಾಗಾಟದ ವಾಹನವನ್ನು ತಡೆಹಿಡಿಯಲಾಗಿದೆ.ಹಿಂಸಾತ್ಮಕವಾಗಿ ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ್ದಾರೆ.

ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದು, ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದಂತೆ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ ವಾಹನ ಹಾಗೂ 15 ಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಯುವಕರು ಈ ಕಾರ್ಯಾಚರಣೆ ನಡೆಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಹಲವೆಡೆಯಿಂದ ಗೋವುಗಳನ್ನು ತುಂಬಿ ಮಂಗಳೂರಿಗೆ ಸಾಗಾಟ ನಡೆಸಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ, ಏಸ್ ವಾಹನದಲ್ಲಿ ಮೇಲ್ಬಾಗದಲ್ಲಿ ತರಕಾರಿ, ತಳಭಾಗದಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ.

Related posts

ಉಜಿರೆ: ಮಾಚಾರು ನಿವಾಸಿ ರಿಕ್ಷಾ ಚಾಲಕ ಸುಧಾಕರ ನಾಪತ್ತೆ

Suddi Udaya

ರಾಜ್ಯ ಮಟ್ಟದ ಪೊಲೀಸ್‌ ಇಲಾಖಾ ಕ್ರೀಡಾಕೂಟ: ಪೋರ್ಟ್ರೇಟ್ ಪಾರ್ಲೆ ಟೆಸ್ಟ್ ನಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ವಿಜಯಕುಮಾ‌ರ್ ರೈ ತೃತೀಯ ಸ್ಥಾನ

Suddi Udaya

ಕು| ಸೌಜನ್ಯ ಕೊಲೆ ಆರೋಪಿಗಳಿಗೆ ಸಹಕಾರ ನೀಡಿದ ವ್ಯಕ್ತಿಗಳು ಹುಚ್ಚರಂತೆ ನಮ್ಮ ಕಣ್ಣ ಮುಂದೆ ತಿರುಗಾಡಲಿದ್ದಾರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಖಾವಂದರೆ ಬಗ್ಗೆ ಅಪಪ್ರಚಾರ ಮಾಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಹಕ್ಕೋತ್ತಾಯ ಜಾಥಾದಲ್ಲಿ ಮನವಿ ಸ್ವೀಕರಿಸಿ ಹರೀಶ್ ಪೂಂಜ ಹೇಳಿಕೆ

Suddi Udaya

ಬಂಗಾಡಿ ಸಿಎ ಬ್ಯಾಂಕಿನ ಮಾಜಿ ನಿರ್ದೇಶಕ ಎಸ್. ಲಿಂಗಪ್ಪಗೌಡ ನಿಧನ

Suddi Udaya

ಓಡಿಲ್ನಾಳ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಶಾರದ ಪೂಜಾ ಉತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ

Suddi Udaya

ನಾರಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Suddi Udaya
error: Content is protected !!