26.7 C
ಪುತ್ತೂರು, ಬೆಳ್ತಂಗಡಿ
October 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಶಾಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಛತಾ ಕಾರ್ಯ

ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -ll ಧರ್ಮಸ್ಥಳದಲ್ಲಿ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾದ ಶೌರ್ಯ ವಿಪತ್ತು ನಿರ್ವಹಣಾ ತಂಡ ಧರ್ಮಸ್ಥಳ” ದ ಸೇವಾ ಪ್ರತಿನಿಧಿ ಸುಜಾತ ಮತ್ತು ಘಟಕ ಪ್ರತಿನಿಧಿ ನಳೀನ್ ಬೇಕಲ್ ಜೊತೆಗೆ ತಂಡದ ಸದಸ್ಯರು ಸೇರಿ ಶಾಲೆಯ ಕೊಠಡಿಗಳು ಮತ್ತು ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಮಾಡುವುದರ ಮೂಲಕ ತಂಡದ ಸೇವೆಯನ್ನು ಶಾಲೆಗೆ ನೀಡಿರುತ್ತಾರೆ.

ಇವರ ಜೊತೆಗೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೆ ನಂದ ಮತ್ತು ಸಮಿತಿಯ ಸದಸ್ಯರಾದ ರೂಪೇಶ್ ಕೆ, ನರೇಶ್ ಮತ್ತು ನಾಗೇಶ್ ಜೊತೆಗೂಡಿದರು. ಮುಖ್ಯ ಶಿಕ್ಷಕಿ ಪುಷ್ಪಾ.ಎನ್ ಮತ್ತು ಸಹ ಶಿಕ್ಷಕರಾದ ವಿಜಯ, ಹೇಮಲತ, ಅತಿಥಿ ಶಿಕ್ಷಕರಾದ ಶ್ರೀಮತಿ ಭವ್ಯ, ಶ್ರೀಮತಿ ಜಯಶ್ರೀ, ಕುಮಾರಿ ಕಾವ್ಯ, ಸಹಾಯಕಿಯವರಾದ ಶ್ರೀಮತಿ ಪ್ರಸನ್ನ ಮತ್ತು ಶ್ರೀಮತಿ ಯಶೋಧ ಮತ್ತು ನಮ್ಮ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಸೇರಿದರು.

ಶೌರ್ಯ ಮತ್ತು ವಿಪತ್ತು ನಿರ್ವಹಣೆ ತಂಡದ ಸಮಾಜಮುಖಿ ಸೇವೆ ಮತ್ತು ತುರ್ತು ಸಂದರ್ಭದಲ್ಲಿ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಹಿಮಾನ್ಸ್ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya

ನಾಳ ಯಕ್ಷಕೂಟದ ವತಿಯಿಂದ ಯಕ್ಷಗಾನ ವೈಭವ

Suddi Udaya

ಪುಂಜಾಲಕಟ್ಟೆ: ಹಟ್ಟತ್ತೋಡಿ ನಿವಾಸಿ ಕೃಷಿಕ ಗೋವಿಂದ ಗೌಡ ನಿಧನ

Suddi Udaya

ಸುಲ್ಕೇರಿ: ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ಮಾಸಿಕ ಸಭೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆಟಿದ ಕಮ್ಮೆನ

Suddi Udaya
error: Content is protected !!