April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು : ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ , ದರ್ಶನ ಬಲಿ , ಬಟ್ಟಲು ಕಾಣಿಕೆ, ಮಹಾಪೂಜೆ

ಬಂದಾರು : ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಹಾಗೂ ಗೌರವಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಯವರ ನೇತೃತ್ವದಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ನಡೆಯಿತು.

(ಎ. 08) ಇಂದು ಬೆಳಗ್ಗೆ ಉತ್ಸವ ಬಲಿ, ವಿಶೇಷ ಸುತ್ತುಗಳು, ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ, ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಂತರ ಪಲ್ಲಪೂಜೆ, ಆರಾಟಕ್ಕೆ ಕುದಿ ಕರೆಯುವುದು, ಪ್ರಸಾದ ವಿತರಣೆ, ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ 3.30 ರಿಂದ 5.30 ರ ವರೆಗೆ ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಸೇವೆ, ಸಂಜೆ 6.30 ರಿಂದ ತೇರ ಕಲಶ, ಉತ್ಸವ ಬಲಿ, ವಿಶೇಷ ಸುತ್ತುಗಳು, ನಂತರ ರಕ್ತೇಶ್ವರಿ ದೈವದ ನೇಮೋತ್ಸವ, ರಾತ್ರಿ 10.30 ಕ್ಕೆ ಶ್ರೀ ಸದಾಶಿವ ದೇವರ ರಥೋತ್ಸವ, ನಂತರ ರಕ್ತೇಶ್ವರಿ ದೈವದ ಸಹಿತ ಶ್ರೀ ದೇವರ ಮೂಲ ಕ್ಷೇತ್ರಕ್ಕೆ ಭೇಟಿ, ರಾತ್ರಿ 11.00 ಕ್ಕೆ ಶ್ರೀ ಕ್ಷೇತ್ರಕ್ಕೆ ದೇವರ ಆಗಮನ, ನಂತರ ಫಲಾಹಾರ ಮತ್ತು ಭೂತಬಲಿ, ನಂತರ ದೇವರ ಶಯನೋತ್ಸವ ಕಾರ್ಯಕ್ರಮ ಚೆಂಡೆನಾದನ, ಬ್ಯಾಂಡ್ ವಾಳಗ, ಸಿಡಿಮದ್ದು, ಜೇಂಕಾರದೊಂದಿಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮ ನಡೆಯಲಿದೆ.

Related posts

ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಅಧ್ಯಕ್ಷರಾಗಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಆಯ್ಕೆ

Suddi Udaya

ಕನಾ೯ಟಕ ಯಕ್ಷಗಾನ ಅಕಾಡೆಮಿ ನೂತನ ಸದಸ್ಯರ ನೇಮಕ

Suddi Udaya

ಮಚ್ಚಿನ: ಮುಡಿಪಿರೆ ರಸ್ತೆ ದುರಸ್ತಿ

Suddi Udaya

ಗುರುವಾಯನಕೆರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ

Suddi Udaya

ಸೌತಡ್ಕದಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ: ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Suddi Udaya

ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಶ್ರೇಯಾ ಕೆ ಎಚ್ ಗೆ ಪ್ರಥಮ ಸ್ಥಾನ

Suddi Udaya
error: Content is protected !!