37.5 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಜಿತ್ ಪೂಜಾರಿ ಕನ್ಯಾಡಿ ರಚಿಸಿರುವ ‘ಬಂದೆನು ಶಾಲೆಗೆ ಓಡೋಡಿ’ ಹಾಡು ಬಿಡುಗಡೆ

ಬೆಳ್ತಂಗಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯ ಕುರಿತಾಗಿ ಅಜಿತ್ ಪೂಜಾರಿ ಕನ್ಯಾಡಿಯವರು ರಚಿಸಿರುವ ಬಂದೆನು ಶಾಲೆಗೆ ಓಡೋಡಿ ಹಾಡಿನ ಬಿಡುಗಡೆ ಕಾರ್ಯಕ್ರಮ ಕನ್ಯಾಡಿ ಶಾಲೆಯಲ್ಲಿ ನಡೆಯಿತು.


ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಕಾರಂತ್ ಜೊತೆಗೂಡಿ ಬಿಡುಗಡೆಗೊಳಿಸಿದರು.ಕಲಿತ ಶಾಲೆಗೆ ಒಬ್ಬ ಹಿರಿಯ ವಿದ್ಯಾರ್ಥಿಯಾಗಿ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯವನ್ನು ಅಜಿತ್ ಪೂಜಾರಿಯವರು ಮಾಡಿದ್ದಾರೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಸರ್ಕಾರಿ ಶಾಲೆಗಳ ಉನ್ನತಿಗಾಗಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಸೇರಿಸಿ ಇನ್ನೊಂದು ಹಾಡು ಮಾಡಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.


ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ ಶಾಲೆಯೊಂದಿಗೆ ಮಕ್ಕಳು ಹಾಗೂ ಪೋಷಕರನ್ನು ಭಾವನಾತ್ಮಕವಾಗಿ ಬೆಸೆಯುವಂತಹ ಅದ್ಭುತವಾದ ಶಕ್ತಿ ಈ ಹಾಡಿನಲ್ಲಿ ಇದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿಯವರು ಮಾತನಾಡಿ ಬಂದೆನು ಶಾಲೆಗೆ ಓಡೋಡಿ ಹಾಡು ಮುಂದಕ್ಕೆ ಬಂದೆನು ಸರಕಾರಿ ಶಾಲೆಗೆ ಓಡೋಡಿ ಎನ್ನುವ ರೀತಿಯಲ್ಲಿ ಈ ಹಾಡು ಕಾರಣೀಭೂತವಾಗುತ್ತದೆ ಹಾಗೂ ಒಬ್ಬ ಶಾಲೆಯ ಹಳೆವಿದ್ಯಾರ್ಥಿಯಾಗಿ ಅಜಿತ್ ಪೂಜಾರಿ ಕನ್ಯಾಡಿಯವರದ್ದು ನಿಜವಾಗಿಯೂ ಸ್ಫೂರ್ತಿ ಹಾಗೂ ಮಾದರಿಯ ಕೆಲಸ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ದೊಂಡೋಲೆ ಮನೆಯ ಪುರಂದರ ರಾವ್, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ್ ರಾವ್, ಪತ್ರಕರ್ತ ದಾಮೋದರ್, ನಿವೃತ್ತ ದೈಹಿಕ ಶಿಕ್ಷಕರಾದ ರಮೇಶ್ ಕಾರಂತ್, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು ಪ್ರೀತಮ್ ಡಿ ಧರ್ಮಸ್ಥಳ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ನಂದ ಕೆ ಹಾಗೂ ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಪುಷ್ಪಾ ಎನ್ ಉಪಸ್ಥಿತರಿದ್ದರು.


ಶಾಲಾ ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಜಿತ್ ಪೂಜಾರಿ ಅವರನ್ನು ಆಶೀರ್ವಾದ ಪೂರ್ವಕವಾಗಿ ಶಾಲೆಯ ವತಿಯಿಂದ ಗೌರವಿಸಲಾಯಿತು. ಸುಬ್ರಾಯ ಅಕ್ಷಯ್ ನಗರ ನಿರೂಪಿಸಿ ಸುದರ್ಶನ ಕೆ.ವಿ. ಯವರು ಧನ್ಯವಾದವಿತ್ತರು.

Related posts

ಉಜಿರೆ ಹಳೆಪೇಟೆಯಲ್ಲಿ ಫ್ಯಾಬ್ರಿಕ್ ಲೂಮ್ ರೆಡಿಮೇಡ್ ಶಾಪ್ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರೊಂದಿಗೆ ಸಂವಾದ

Suddi Udaya

ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!