April 21, 2025
Uncategorized

ಅಂಡೆತ್ತಡ್ಕ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಮುದಾಯ ದತ್ತ ಶಾಲಾ ಕಾರ್ಯಕ್ರಮ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತ್ತಡ್ಕದಲ್ಲಿ ಎ.8ರಂದು ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರಗಿತು. ಅಧ್ಯಕ್ಷ ಸತೀಶ್ ಪೂಜಾರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದ ಮಾರ್ಗದರ್ಶಕರಾಗಿ ಸರಕಾರಿ ಪ್ರೌಢಶಾಲೆ ಬುಳೇರಿ ಇಲ್ಲಿನ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ರಶ್ಮಿ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇಳಂತಿಲ ಗ್ರಾಮ ಪಂಚಾಯಿತಿನ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಸವಿತಾ ಹೆಚ್ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.ಗ್ರಾಮ ಪಂಚಾಯಿತಿನಭೆಯಲ್ಲಿ ದತ್ತಿ ನಿಧಿ ಪ್ರಾಯೋಜಕರಲ್ಲಿ ಓರ್ವರಾದ ಶ್ರೀಮತಿ ಇಂದಿರಾ .ವಿ ಭಟ್ ಉಪಸ್ಥಿತರಿದ್ದರು.

ಸಭೆಯಲ್ಲಿ ಕಲಿಕೆ, ಆಟೋಟ ಸ್ಪರ್ಧೆಗಳಲ್ಲಿ ಸಾಧನೆಯನ್ನು ಮಾಡಿರುವಂತಹ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಪ್ರತಿಭಾವಂತ, ಆದರ್ಶ, ಬಡ ಹಾಗೂ ಕಲಿಕೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪ್ರಾಯೋಜಕರ ವತಿಯಿಂದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಸುಮಾರು 11 ವರ್ಷಗಳ ಕಾಲ ಅಕ್ಷರ ದಾಸೋಹ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿದಂತಹ ಶ್ರೀಮತಿ ವಸಂತಿರವರನ್ನು ಶಾಲಾ ಎಸ್ ಡಿ ಎಂ ಸಿ ಪೋಷಕ ವೃಂದ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ವತಿಯಿಂದ ಫಲ ಪುಷ್ಪ, ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಕೃಷ್ಣಪ್ಪ ಪೂಜಾರಿ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಾಜರಿದ್ದರು. ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ನಯನ ಇವರು ಸರ್ವರನ್ನು ಸ್ವಾಗತಿಸಿ, ಶ್ರೀಮತಿ ಜೆಸಿಂತಾ ಇವರು ಧನ್ಯವಾದ ಸಲ್ಲಿಸಿದರು.ಶಿಕ್ಷಕರಾದ ಅಣ್ಣಪ್ಪ ನಾಯ್ಕ, ಗುರುಪ್ರಸಾದ್, ಶ್ರೀಮತಿ ಭವ್ಯ, ಶ್ರೀಮತಿ ಅಕ್ಷಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಿಕ್ಷಕರಾದ ನಾರಾಯಣಗೌಡ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಜು.31 ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಸೇವಾ ನಿವೃತ್ತಿ: ನಿವೃತ್ತಿಯಂದು ಶಿಷ್ಯರಿಂದ ಅಕ್ಷರದ ಗುರು ಕಾಣಿಕೆ

Suddi Udaya

ಇಂದಬೆಟ್ಟು: ಕಲ್ಲಾಜೆ ಶಾಲೆಯ ಶಿಕ್ಷಕಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ ನಿಧನ

Suddi Udaya

ಎಸ್. ಡಿ. ಯಂ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು ರ್‍ಯಾಂಕ್ ಹಾಗೂ ಶೇ. 100 ಫಲಿತಾಂಶ

Suddi Udaya

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

Suddi Udaya

ಪದ್ಮುಂಜ ಶಾಲೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿಲ್ಲ ಎಂಬ ಆರೋಪ: ಪರೀಕ್ಷೆಗೆ ಹಾಜರಾದ ಇಬ್ಬರೂ ವಿದ್ಯಾರ್ಥಿಗಳು

Suddi Udaya

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

Suddi Udaya
error: Content is protected !!