ಅಳದಂಗಡಿ: ಸಂಸ್ಕಾರ ಭಾರತೀ ಬೆಳ್ತಂಗಡಿ-ಹನುಮೋತ್ಸವ ಸಮಿತಿ ಅಳದಂಗಡಿ ಆಶ್ರಯದಲ್ಲಿ ಹನುಮ ಜಯಂತಿ ಪ್ರಯುಕ್ತ ಇಂದು (ಎ.12) ಅರಮನೆ ನಗರಿ ಅಳದಂಗಡಿ ಶ್ರೀ ಸತ್ಯ ದೇವತಾ ಮೈದಾನದಲ್ಲಿ “ಹನುಮೋತ್ಸವ 2025” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಹನುಮ ನಾಮ ಸ್ಮರಣೆ: ಬ್ರಹ್ಮಶ್ರೀ ಮಡಂತ್ಯಾರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹನುಮ ಮಹಾಯಾಗ ನೇರವೇರಲಿದೆ. ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತ ಶುದ್ಧಿಗಳು, ವ್ರತಾಧಾರಿಗಳಿಂದ ಸಂಕಲ್ಪ ಪ್ರಾರ್ಥನೆ, ಸಾಮೂಹಿಕ ಮಹಾಸಂಕಲ್ಪ, ಅಗ್ನಿಜನನ, ಸಹಸ್ರ ಕದಳೀ ಹನುಮ ಯಾಗ, ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಪ್ರಧಾನ ಹೋಮ, ಕಲಶ ಪೂಜೆ, ಮಂಡಲ ಪೂಜೆ, ಹನುಮ ಮಹಾಯಾಗ, ಪೂರ್ಣಾಹುತಿ, ಎಳ್ಳುಗಂಟು ಸಮರ್ಪಣೆ ಪೂಜೆ, ಮಹಾ ಪೂಜೆ, ಹನುಮ ಶ್ರೀರಕ್ಷೆ ಧಾರಣೆ ಮತ್ತು ಪ್ರಸಾದ ವಿತರಣೆ ನಡೆಯುತ್ತಿದೆ.

ಕೇಸರಿ ಪಾತಕೆ ಗಳಿಂದ ಅರಮನೆ ನಗರಿ ಅಳದಂಗಡಿ ಕಂಗೋಳಿಸುತ್ತಿದೆ. ವಿದ್ಯುತ್ ದೀಪಾಲಂಕಾರ ಜನಾಕರ್ಷಣೆ
ಗೆ ಅಣಿಯಾಗುತ್ತಿದೆ. ಲಂಕಾದಹನ ಕಾರ್ಯಕ್ರಮ ಜನರಲ್ಲಿ ಕುತೂಹಲ ಮೂಡಿಸಿದ್ದು, ಹನಮೋತ್ಸವಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ .


ಈ ಸಂದರ್ಭದಲ್ಲಿ ಹನುಮೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಸಮಿತಿ ಪ್ರಮುಖರಾದ ಪ್ರಭಾಕರ ಶೆಟ್ಟಿ ಉಪಡ್ಕ, ನಿತ್ಯಾನಂದ ನಾವರ, ಪ್ರಸಾದ್ ಬೆಳ್ತಂಗಡಿ, ವಿಜಯ ಗೌಡ ವೇಣೂರು, ಶಶಿಧರ ಎ. ಅಳದಂಗಡಿ, ಉಮೇಶ್ ಸುವರ್ಣ ಅಳದಂಗಡಿ, ವಿಶ್ವನಾಥ ಶಿರ್ಲಾಲು, ಮಾಧವ ಶಿರ್ಲಾಲು, ಸಂಜೀವ ದೇವಾಡಿಗ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಸತೀಶ್ ಶಿರ್ಲಾಲು, ಹರೀಶ್ ಕ್ಲಲಾಜೆ, ಪ್ರಶಾಂತ್ ಶಾಂತಿನಗರ, ರವಿ ಪೂಜಾರಿ, ಪ್ರಮೋದ್ ಆರ್ ನಾಯ್ಕ್, ಮೋಹನ್ ದಾಸ್, ಜಯ ಸಾಲ್ಯಾನ್, ಸಂತೋಷ್ ಹೆಗ್ಡೆ ತೆಂಕ ಕರಂದೂರು ಮೊದಲಾದವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.