ಮಡಂತ್ಯಾರು: ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ 2025 ರಲ್ಲಿ ವಾಣಿಜ್ಯ ವಿಭಾಗದಲ್ಲಿ 593 ಸಾಧನೆಗೈದು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 6ನೇ ಸ್ಥಾನ ಮತ್ತು ತಾಲೂಕು ಮಟ್ಟದಲ್ಲಿ ಮೊದಲ ಸ್ಥಾನ ಸಾಧನೆಗೈದ ಜೋಶನ್ ರಫಾಯೆಲ್ ಡಿಸೋಜ ಅವರನ್ನು ಸೇಕ್ರೆಡ್ ಹಾಟ್‌೯ ವಿದ್ಯಾಸಂಸ್ಥೆಗಳ ಜೊತೆ ಕಾಯ೯ದಶಿ೯ಗಳಾದ ವಂ|ಡಾ| ಸ್ಟ್ಯಾನಿ ಗೋವಿಯಸ್ ಹೂಹಾರ, ಫಲಪುಷ್ಪ ಹಾಗೂ ಪೇಟ ತೊಡಿಸಿ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿದರು.

ಈ ಸಂದಭ೯ದಲ್ಲಿ ವಿದ್ಯಾಥಿ೯ಯ ಹೆತ್ತವರಾದ ಜೆರೋಮ್ ಡಿಸೋಜ ಹಾಗೂ ಶ್ರೀಮತಿ ರೀಟಾ ರೋಡ್ರಿಗಸ್ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ವಿದ್ಯಾಥಿ೯ ಜೋಶನ್ ರಫಾಯೆಲ್ ಡಿಸೋಜ ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಮಾಗ೯ದಶ೯ನಕ್ಕೆ ವಂದನೆ ಸಲ್ಲಿಸಿದರು.

ಚಚ್‌೯ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರುಗಳಾದ ವಿಲಿಯಂ ಪಿಂಟೊ ಹಾಗೂ ಐವನ್ ಸಿಕ್ವೇರಾ, ಆಡಳಿತ ಮಂಡಳಿಯ ಸದಸ್ಯರಾದ ಲಿಯೋ ನೊರೊನ್ಹಾ, ಫಿಲಿಪ್ ಡಿಕುನ್ಹಾ ಹಾಗೂ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲರು ಸೂರಜ್ ಚಾಲ್ಸ್‌೯ ಸ್ವಾಗತಿಸಿ, ಉಪನ್ಯಾಸಕ ವಿನ್ಸೆಂಟ್ ರೋಡ್ರಿಗಸ್ ಧನ್ಯವಾದವಿತ್ತರು. ಉಪನ್ಯಾಸಕಿ ಶ್ರೀಮತಿ ರೆನಿಶಾ ವೇಗಸ್ ಕಾರ‍್ಯಕ್ರಮ ನಿವ೯ಹಿಸಿದರು.