
ಬೆಳ್ತಂಗಡಿ; ಉಜಿರೆಯಲ್ಲಿ
ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಶಾಂತಿ ಭಂಗ ಆರೋಪ
ಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎ.19ರಂದು ಪ್ರಕರಣ ದಾಖಲಿಸಲಾಗಿದೆ.
ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್. ಐ ಮುರಳೀಧರ ನಾಯ್ಕ ಕೆ.ಜಿ ಅವರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಪುನೀತ್ ಕೇರೆಹಳ್ಳಿ ಅವರು ಉಜಿರೆಗೆ ಬಂದರೆ ಉಜಿರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಭಂಗ ಉಂಟುಮಾಡುವ ಸಾಧ್ಯತೆ ಇದ್ದ ಕಾರಣ ದ.ಕ ಜಿಲ್ಲಾಧಿಕಾರಿಯವರು ಸರ್ವಜನಿ ಹಿತದೃಷ್ಟಿಯಿಂದ ಪುನೀತ್ ಕೇರೆಹಳ್ಳಿ ಗೆ ಜಿಲ್ಲೆಯ ಸರಹದ್ದಿನೊಳಗೆ ಪ್ರವೇಶಿಸದಂತೆ ಕಲಂ163 ಬಿ.ಎನ್.ಎಸ್ 2023 ರಂತೆ ನಿರ್ಭಂಧಿಸಿ ಮಾನ್ಯ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಆದರೆ ಆದೇಶವನ್ನು ಉಲ್ಲಂಘಿಸಿ ಶನಿವಾರ ಸಂಜೆಯ ವೇಳೆ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಬಳಿ ಸಾರ್ವಜನಿಕ ರಸ್ತೆಗೆ ಬಂದಾಗ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಹಾಗೂ ಇತರರು ಗುಂಪು ಸೇರಿಕೊಂಡು ಉಜಿರೆ ಎಸ್.ಡಿ.ಎಂ ಕಾಲೇಜಿನ ಎದುರು ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಶಾಂತಿ ಭಂಗ ತರುವ ಉದ್ದೇಶದಿಂದ ಪುನೀತ್ ಕೇರೆಹಳ್ಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.