ಬಂದಾರು: ಇಲ್ಲಿನ ಬಟ್ಲಡ್ಕ ಜುಮಾ ಮಸೀದಿಯ ಆವರಣದಲ್ಲಿ ಉರೂಸ್ ಸಮಾರೋಪ ಸಮಾರಂಭವು ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಂದಾರು ವಹಿಸಿದ್ದರು. ಜುಮಾ ಮಸೀದಿ ಬಟ್ಲಡ್ಕ ಗೌರವ ಅಧ್ಯಕ್ಷ ಶೈಖುನಾ ಸಾದಾತ್ ತಂಙಲ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತವಿಕ ಭಾಷಣ ಮರ್ಕಸ್ ಗಾರ್ಡನ್ ಪೂನೂರು ಕೇರಳ ಇದರ ಜನರಲ್ ಮೇನೇಜರ್ ಅಬೂಸ್ವಾಲಿಹ್ ಸಖಾಫಿ ನೆರವೇರಿಸಿದರು.
ಸ್ಥಳೀಯ ಖತೀಬ್ ಬಹು ಮುಹಮ್ಮದ್ ಆರಿಫ್ ಮದನಿಯವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಮುಖ್ಯ ಪ್ರಭಾಷಣ ಮುಳ್ಳೂರುಕೆರೆ ಮುಹಮ್ಮದ್ ಅಲಿ ಸಖಾಫಿ ನಡೆಸಿಕೊಟ್ಟರು. ಕಾರ್ಯಕ್ರಮ ದಲ್ಲಿ ಜುಮಾ ಮಸೀದಿ ಬಟ್ಲಡ್ಕ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಸ್ವಾಗತಿಸಿದರು.
ರಹೀಂ ಬಟ್ಲಡ್ಕ ಧನ್ಯವಾದ ಸಮರ್ಪಿಸಿದರು.